Wednesday, 1 April 2015

ಕವನ

"ಕರಿ"



ಕರಿಯೆಂದೇ ಹೆಣ್ಣನು
ಕರೆದೆಬಿಡಲು
ಅಂಕುಶವೇ ಮನದ ಭಾವಗಳು
ಅದ ಹಿಡಿದ ಮಾವುತ
ಸಂಸ್ಥಾಪಿಸುವನು ಒಡೆತನವ..

ಪಳಗಿಸಲು ನುರಿತ ಬೆಡಗು
ರಾಜ ಬೀದಿಯ ತುಂಬೆಲ್ಲಾ
ಮೆಚ್ಚುಗೆಯ ಪ್ರೇಕ್ಷಕರು
ರಾಜ ಮರ್ಯಾದೆಯ ಕುರುಹುಗಳು
ಆನೆಯ ಒಡಲೆಲ್ಲಾ ಕುಹುಕಗಳು

ಅಷ್ಟಗಲದ ಆನೆಯ
ಇಡಿಯಾಗಿ ಬಂಧಿಸಿದ 
ಭಾವಗಳು
ಅಂಕುಶವೇ ಆದದ್ದು
ಹೆಣ್ಣಿಗಷ್ಟೇ ಅರಿತ ಸತ್ಯ

ನಾವು ಹೆಣ್ಣುಗಳು
ಮದಿಸಿದ ಆನೆಗಳನೇ
ಹೋಲುವೆವು............

31/03/2015

No comments:

Post a Comment