ಮುನ್ನೆಡೆಯುತ್ತಲಿದ್ದೆ
ಆದರೆ ಅದೂ ಹಿನ್ನೆಡೆಯೇ..
ಅಂದಿನ ಸಿಬಿರು
ಇಂದಿಗೂ ಇರಿಯುತ್ತಲಿದೆ
ಮುರಿದ ಮುಳ್ಳು
ಉಳಿದು ಎದೆಯೊಳಗೆ...
%%%
ದಾರ ಹರಿದು ಬಿದ್ದ
ಮುತ್ತುಗಳು
ಅನುಭವಿಸಿ ಸ್ವತಂತ್ರ
ಕುಣಿಯುತ್ತಿದ್ದವು...
09/04/2015
%%%
ಕಣ್ಣೀರ ಚಿತ್ರಿಸಲಾರೆ
ಈ ನಗುವಿಗೆ
ಪ್ರೀತಿ ಹುಟ್ಟಿದ ಮೇಲೆ..
08/04/2015
%%%
ಹೃದಯ ಬಲೂನಿಗೆ
ಪ್ರೀತಿ ತಂಗಾಳಿ
ಬಿಸಿಯಾಗಿಯೇ ಏರಿತ್ತು!
07/04/2015
No comments:
Post a Comment