"ಹುಳು"
ಎಷ್ಟೊ ಬಾರಿ
ನಾನೊಂದು ಹುಳುವಾಗಿಯೇ
ಕಾಣುತ್ತೇನೆ
ಕಣ್ಮರೆಯಲಿ ಕೊರೆಯುತ್ತಾ..
ಮುಳ್ಳುಗಳಲ್ಲೇ ಚುಚ್ಚುತ್ತಾ..
ತನಗೆ ತಾ
ಕಂಬಳಿ ಹುಳುವಾಗಿ!
ರಾತ್ರಿ ಕಣ್ಮುಚ್ಚಿದಾಗ
ಬರೀ ಚಿಟ್ಟೆಯದೇ ಕನಸು
ಹಾರಲಾರೆನೆನಿಸಿ ಕನಸಲೂ ಅಳುವೆ
ಎಷ್ಟೋ ಕಂಬಳಿ ಹುಳುಗಳು
ಚಿಟ್ಟೆಗಳಾಗುವುದೇ ಇಲ್ಲ ನಡುವಲೇ ಅಳಿದು
ಕಂಬಳಿ ಹುಳುವೆಂದರೆ
ಭಾರಿ ಬೆಚ್ಚುತ್ತದ್ದೆ ಚಿಕ್ಕವಳಿದ್ದಾಗ
ಆದರೆ ಚಿಟ್ಟೆಯನು ಅಷ್ಟೇ ನಾಜೂಕಾಗಿ ಹಿಡಿಯುತ್ತಿದ್ದೆ
ಬೆರಳಗಳಲಿ ಬಣ್ಣ ಹತ್ತಿಸಿಕೊಂಡು
ಕೆನ್ನೆ ಹಣೆಗೆ ಹಚ್ಚಿ ಮೆರೆದಿದ್ದೆ
ಕನಸು ಕಳೆದುಕೊಂಡ ಆ ರೆಕ್ಕೆ ನವೆದ ಚಿಟ್ಟೆಗಳು
ಇನ್ನೂ ಹಾರುತ್ತಿವೆ ಎನ್ನ ಮನದ ಬಾಂದಳದಲ್ಲಿ
ಅರೆ ಬರೆಯ ಚಿತ್ರಗಳಾಗಿ ಹಸಿ ಹಸಿಯ ಚಂದ್ರಮಗಳಾಗಿ
ಕಾಂತಿಯಿದ್ದು ಕಾಣುವಷ್ಟು ಬೆಳಕಿಲ್ಲ
ಇರುಳುಗುರುಡೆಂದರೆ ಇದುವೇ ಏನೋ...!!
30/03/2015
No comments:
Post a Comment