ಬೇಧ
ಹಾಡಿ ನಲಿವ ಹಕ್ಕಿಗೆ
ಯಾವ ಗಾಳಿಯು
ಕೊರಳಿಗೆ ಬೇಧ
ಅರಳೊ ಹೊಸ ಹೂವಿಗೆ
ಮಕರಂದಗಳ
ಯಾವ ಸ್ಪರ್ಷ ಬೇಧ
ದಿನವೂ ಹುಟ್ಟಿ
ಮುಳುಗೊ ಸೂರ್ಯನಿಗೆ
ಯಾವ ನಿಂದನೆ ಸ್ತುತಿಗಳ ಬೇಧ
ತಿರುಗೊ ಭೂಮಿಗೆ
ವಿರುದ್ಧವಾಗಿ
ಕ್ರಮಿಸಿದ ಮನಗಳ
ಯಾವ ಬೇಧ
ಸತ್ತು ಹುಟ್ಟಿದ ಜೀವಕೆ
ಯಾವ ಸೋಲು ಯಾವ ಗೆಲುವು
ಯಾವ ಬೇಧ
ನೀತಿ-ಅನೀತಿಗಳ ಹೊರತು.. !
28/03/2015
No comments:
Post a Comment