ಮೌನದ ಮಾತುಗಳು
ಮೌನದ ಮಾತುಗಳಿಗೆ
ಕಿವಿಯಾಗಿ ಕನಸಾಗಿ
ಹೊರಹೊಮ್ಮುವ
ಹೂ ಮನವ
ಪ್ರೀತಿಸದೇ ನಿಲ್ಲಲಾರೆ!
ಕಣ್ಣೊಳ ಭಾವಕೆ
ನೆರಳಾಗಿ ಮೌನವಾಗಿ
ಜೊತೆಗಾಗಿ ಕಾಯುವ
ಮುಗ್ಧ ಮನವ
ಬಯಸದೆ ಇರಲಾರೆ!
ಅಷ್ಟು ಮಾತುಗಳೊಳಗೆ
ಸಣ್ಣದೊಂದು ಮೌನದ ನೋಟಕ್ಕಷ್ಟು
ಆದರ ಪ್ರತಿಸ್ಪಂದನೆಯ
ಪ್ರೀತಿಯ ಮನವ
ಇನ್ನಷ್ಟು ತಡೆದು ಕಾಯಿಸಲಾರೆ!
ಈ ಮಾತು ಮೌನಗಳೊಳಗೆ
ನನ್ನ ಮಾತುಗಳ
ಅವನ ಮೌನದಲಿ ಕಂಡು
ನನ್ನ ಮಾತು ಮತ್ತೂ ಮೌನ
ಹೌದು ಮೌನವಷ್ಟೇ
ಆದರೂ ಅವನೊಂದಿಗೆ
ಮಾತನಾಡದೆ ನಾ ಇರಲಾರೆ!..
30/03/2015
No comments:
Post a Comment