Sunday, 12 April 2015

ಕವನ

ಭ್ರಮೆ



ಒಂದಷ್ಟು ದಿನಗಳಿಂದ
ಭ್ರಮೆಗಳನ್ನೇ 
ಪೋಷಿಸಿಕೊಂಡು ಬಂದಿದ್ದೆ
ಇದ್ದಷ್ಟು ಕಾಲ 
ಖುಷಿಯನೇ ಎರೆದಿತ್ತು
ಹೋಗುವಾಗಲೂ 
ಖುಷಿಯ ನೆನಪನ್ನೇ 
ನೀಡಿ ಹೊರಡುತ್ತಿದೆ...
ಭ್ರಮೆಯೇ ಆದರೂ
ಕಳೆದ ಮೇಲೂ 
ಪ್ರೇರಣೆಯಾಗಿರಬೇಕು
ಮತ್ತಷ್ಟು 
ಭ್ರಮೆಗಳ ಬದುಕ ಬದುಕಲು..

09/04/2015

No comments:

Post a Comment