Sunday, 12 April 2015

ಕವನ

ತಪ್ಪುಗಳನ್ನು ಸಹ ಮೆಚ್ಚುವೆ...

ತಪ್ಪುಗಳಾಗುವುದು ಸಹಜ
ಆದ ತಪ್ಪನ್ನೇ ಮತ್ತೆ ಮತ್ತೆ
ಮಾಡದಿರುವುದು ಮೆಚ್ಚುಗೆಯೇ ನಿಜ

ಒಂದು ತಪ್ಪಿಗೆ
ಮತ್ತಷ್ಟು ತಪ್ಪು ತಪ್ಪು ತಪ್ಪೊಪ್ಪಿಗೆ
ಬೇಡವೋ ಮನವೇ..
ಕಂಡಿದ್ದೇನೆ ಮತ್ತೆ ಕಾಣ ಬಯಸೆನು

ತಪ್ಪನ್ನೇ ತಿದ್ದುವುದು ಬೇಡ..
ತಪ್ಪುಗಳನ್ನು ಬಿಟ್ಟು
ಸರಿ ಹಾದಿ ಹಿಡಿದರಷ್ಟೇ ಸಾಕು
ನೆನ್ನೆಯ ತಪ್ಪು ಇಂದಿನ ಅನುಭವ

ನೆನ್ನೆಗಳ ಪ್ರೀತಿಸುವುದು ಬೇಡ ತಪ್ಪುಗಳನ್ನು ರಮಿಸುತ್ತ
ಪ್ರೀತಿಸುವುದಾದರೆ ಪ್ರೀತಿಸೋಣ
ಇಂದನ್ನಷ್ಟೇ ನಂಬಿಕೆಯಿದ್ದೊಡೆ
ಎದುರು ಬಂದು ನಿಲ್ಲದ ತಪ್ಪುಗಳ ಪೋಷಿಸುತ್ತಾ 
ಹಿದ್ದಿಕ್ಕುವ ಪ್ರಯತ್ನಗಳಲಿ...

12/04/2015

No comments:

Post a Comment