ಬತ್ತಲಾರದ ಕನಸಿನವಳು
ಕೂಡಿಟ್ಟ ಭಾವಗಳು
ನನ್ನವು ಗೆಳೆಯ..
ಒಮ್ಮಲೆ ಚಿಮ್ಮುವವು
ಬಿಚ್ಚಿಡಲು...
ಆ ರಭಸಕೆ ಗಾಬರಿಯಾಗದಿರು
ನನಗೋ ಮೊದಲೇ ಆತಂಕ
ನೀ ಹತ್ತಿರ ಸುಳಿಯಲು...
ಬತ್ತಿದಂತಿದ್ದ ಆಸೆಗಳೆಲ್ಲಾ
ಹೊರಳಿವೆ ಹೊಸತನಕೆ
ಅದುಮಿಟ್ಟಷ್ಟೇ ಒತ್ತಡದಿ ಉಕ್ಕುವವು..
ತಂಗಾಳಿಯಂತಲ್ಲ ನನ್ನ ಪ್ರೀತಿ
ಮೊರೆವ ಕಡಲು
ಬೇಸಿಗೆಯ ಕಳೆದ ಜೋರು ಮಳೆಯು
ಹೆದರದಿರು ಹುಡುಗ
ಎಂದಿನಂತೆ ಇದು ನಾನೇ
ಬತ್ತಲಾರದ ಕನಸಿನವಳು..
06/04/2015
No comments:
Post a Comment