ಪ್ರೇಮ
ಧ್ಯಾನಿಸಿ ಬರೆಯಲಿಲ್ಲ
ಪ್ರೇಮಿಸಿ ಬರೆದಿದ್ದೆ
ಧ್ಯಾನದಲ್ಲಿ ಪ್ರೇಮವಿತ್ತು
ಪ್ರೇಮದಲ್ಲಿ ಅವನದೇ ಧ್ಯಾನವಿತ್ತು!
ನಡುನಡುವೆ ಈ ಮೌನವೂ
ಬಿಡುವಿಲ್ಲದೇ ಕಾಡಿತ್ತು!....
ಅಕ್ಷರಗಳು ಮತ್ತೂ ನನ್ನ ಕೆಣಕಿ
ಬರೆದುಕೊಳ್ಳಲು ಅವನ ಹುಡುಕಿತ್ತು
ಶಬ್ದಗಳ ಮಥಿಸಿ ಸಾಲುಗಳಲೇ
ಅವನ ಪ್ರೇಮಿಸಿ ಧ್ಯಾನಿಸಲು ಸೂಚಿಸಿತ್ತು...!
30/03/2015
No comments:
Post a Comment