Sunday, 12 April 2015

ಕವನ

ಜೇನ್ನೊಣಗಳ ಗೂಡು ತೊರೆದ
ಅನಾಥ ಪ್ರಜ್ಞೆ

ಗುಯ್ ಗುಡುವ ಶಬ್ಧ
ರೂಢಿಯಾಗಿ ಹೋಗಿ

ಚಿಲಿಪಿಲಿಗಳೊಂದಿಗೆ
ಹಾಡಿ ನಲಿದು ಮುನಿದು

ಒಬ್ಬಳೇ ನಿಂತರೂ ಭೋರ್ಗರೆವ ಮೊರೆತ
ಇಲ್ಲದೆಯೂ ಕೇಳಿ ಬಂದಂತೆ...

ನಿಶ್ಶಬ್ದವ ನಾನೀಗ
ಸಹಿಸಲಾರೆ; ಒಳಗೂ ಹೊರಗೂ..

ನಾಳೆಯಿಂದ
ಶಾಲೆಗೆ ರಜೆ... !!! 

10/04/2015

No comments:

Post a Comment