Sunday, 12 April 2015




ರಜೆಯ ದಿನ
ಪದ್ಯ ಬರೆಯಬಾರದು
ಕಾವ್ಯದೊಂದಿಗೆ
ಸುತ್ತಾಡುವುದ ಬಿಟ್ಟು.. !

%%%

ಮನದ ಕೊಳದೊಳಗೆ
ತಾವರೆ ಅರಳುತ್ತಿತ್ತು
ಹೂವಿನಾಸೆಗೆ ಕೈ ಚಾಚಿದವರು
ಕೊಳದೊಳಗೆ ಕಾಲಿಟ್ಟು 
ರಾಡಿ ಎಬ್ಬಿಸಿದ್ದರು 
ಹೂವೇ ನಿನ್ನದೇನು ತಪ್ಪಿಲ್ಲ
ಸುಮ್ಮನಿರುವುದ ಬಿಟ್ಟು!

02/04/2015

%%%

ಮತ್ತಿಟ್ಟಂತೆ ಭಾವಗಳು
ಹಣೆಯ ಮೇಲೆಲ್ಲಾ
ಬರೆಯದ ಕವಿತೆಗಳು
ಬ್ರಹ್ಮನಿಗೆ ಬಿಡುವು

01/04/2015

No comments:

Post a Comment