ಕೂತು
ಹೆಚ್ಚು ಯೋಚಿಸಿ
ಕೀಳರಿಮೆಯ
ಆಹ್ವಾನಿಸಿಕೊಳ್ಳುವುದಕ್ಕಿಂತ
ಒಂದಷ್ಟು
ಬಿರುಸು
ಹೆಜ್ಜೆಗಳನ್ನಿಟ್ಟು
ಘಾಟಿ
ಎನಿಸಿಕೊಳ್ಳುವುದೇ
ಲೇಸೆನಿಸಿದೆ..!
*****
ನಿಜ ಹೇಳಲು ತುದಿಗಾಲಲ್ಲಿ
ನಿಲ್ಲುವವಳು
ನಿಜವೂ ಇಲ್ಲ ಸುಳ್ಳು ಇಲ್ಲ
ಮೌನದ ಮರೆಯ ಕನಸಿಗೆ ಸೋತು
ಬಹುಶಃ ಭವಿಷ್ಯದ ಅಪರಾಧಿಯಾದೆ!
ಕ್ಷಮಿಸಲಿ ಆ ಮನವು..
ನಿಲ್ಲಿಸಿಕೊಂಡು ಕಾಡಿದ್ದ ಕಾರಣಕೆ
*****
ಕಾವು ಕೊಟ್ಟ ಹಲವು ಸಾಲುಗಳಲ್ಲಿ
ಕೆಲವು ಮರಿಗಳಾಗಿವೆ
ಅವುಗಳ ಹಸಿವಿಗೆ
ನನಗೆ ಬಲೇ ಗಾಬರಿ!
29/03/2015
No comments:
Post a Comment