ಮಳೆ..
ಮೊನ್ನೆಯ ಮಳೆ
ಇನ್ನೂ ಹಸಿಯೇ
ಈ ಸಂಜೆಗೂ
ಅಂತಹುದೇ ಮಳೆ
ಹೊತ್ತಿಗೂ ಮುನ್ನ
ತಂಪಾದ ಇಳೆಯೊಂದಿಗೆ
ಇಳಿಯುತ್ತಿದೆ ಮನವು
ಅಮಲಿನಂತ ನೆನಪಿನೆಡೆಗೆ..
ಕತ್ತಲಿತ್ತು ನಗೆ ಕಾಂತಿಯೂ
ಮಾತು ಮೌನವೂ
ಹುರುಪು ಆತಂಕವೂ
ಕನಸಿನ ಸರಕುಗಳೂ
ಮಳೆಯು ಎಲ್ಲವನ್ನೂ
ಒಟ್ಟುಗೂಡಿಸಿತ್ತು..
ಟ್ರಾಫಿಕ್ ಜಾಮನ್ನೂ
ಗಲಭೆ ಹಾರನ್ನೂ
ಗುರುತು ಹಚ್ಚಲಾರದ ದಾರಿಯನ್ನು
ಜೊತೆಗೆ ಪ್ರೀತಿಯನ್ನೂ..
13/04/2015
No comments:
Post a Comment