Sunday, 12 April 2015

ಕವನ

ಈ ನದಿಯ ದಡವು...

ನನ್ನನೇ ನಾ ಮರೆತು
ಕಳೆಯಬೇಕು 
ಒಂದು ದಿನ 
ನದಿಯ ಕಿನಾರೆಯಲಿ
ಅಲ್ಲಿ ನಾನು ನೀನೆಂಬ
ಬೇಧವೇ ಇಲ್ಲದಂತೆ

ನಿನ್ನವರು ನನ್ನವರೆಲ್ಲಾ
ಚಂದಿರ ತಂಗಾಳಿಗಳೇ ಆಗಿ
ನಡುನಡುವೆ ಝುಳಝುಳನೆಂಬ
ನದಿಯ ಹರಿವು

ಹರಿದು ಹೋಗಲಿ 
ನನ್ನತನ ನಿನ್ನತನವೆಂಬ
ಅಹಂನ ರಜವು...
ಈ ನದಿಯ ದಡವು
ಅನೇಕ ದಿನಗಳ
ನನ್ನ ಕನಸು....

02/04/2015

No comments:

Post a Comment