Wednesday, 1 April 2015

ದಾರಿ ತಪ್ಪಿದಂತಾಗಿದೆ
ನೀನೆಲ್ಲಿರುವೆ?!
ಲಯವು ತಪ್ಪಿದಂತೆ
ನಿರ್ಭಾವುಕನಾಗಿರುವೆ...
ಎಲ್ಲಿರುವೆ ಗೀತೆ
ನೀನೆಲ್ಲಿರುವೆ ನನ್ನ ಕಾಂತೆ

*******

ಎರಡು ಪರಸ್ಪರ ನಿಲುಕದ
ದಡಗಳ ನಡುವೆ
ಸಾಗರವೇ ತುಳುಕಿ
ಒಂದು ಮಾಡಲು
ಯತ್ನಿಸುತ್ತಿತ್ತು
ಕಣ್ಣೀರು ಹೆಚ್ಚಿ
ಮತ್ತೆ ಮತ್ತೆ ಕಡಲು
ಬಿರಿದಿತ್ತು
ದಡಗಳೇ
ಜಾರಿ
ಕಡಲಾಳಕ್ಕಿಳಿದು
ಬಹುಶಃ ಸೇರಿತ್ತು...


********

ಬೇಸಿಗೆಯ ರಾತ್ರಿ ತಂಪು
ಮುಂಜಾನೆ ಹೆಚ್ಚು ನಿದ್ದೆ
ಬಲು ಸೋಮಾರಿತನ
ಕನಸುಗಳಿಗೆ ಬೀಗ ಮುದ್ರೆ..!

31/03/2015

No comments:

Post a Comment