Wednesday, 15 April 2015

ಕವನ

ಕೊಳಲು ದನಿ


ಕೈ ಬಿಟ್ಟು 
ಹೋಗುವ ಕೃಷ್ಣನ
ಇನ್ನೆಷ್ಟು ಹಿಡಿಯುವಳು 
ರಾಧೆ

ಕೈ ಜಾರಿ 
ಕೈಯೊಳುಳಿದ 
ಕೊಳಲ ಹಿಡಿದು
ನುಡಿಸಲಾಗದ 
ನಿರ್ಭಾವುಕತೆಗೆ
ಕೊಳಲ ನೀರಿಗೆಸೆದಳು

ಅಂದಿನಿಂದ 
ನದಿಯೇ ಕೊಳಲ ದನಿಯಾಗಿ
ಮೊರೆಯುತ್ತಿದೆ
ರಾಧೆಯೂ 
ಎಂದಿನಂತೆ ಕೊಳಲ ನಾದಕೆ
ದಡದ ವಾಸಿ..



ಚಿತ್ರ ಕೃಪೆ; ಅಂತರ್ಜಾಲ

No comments:

Post a Comment