Sunday, 12 April 2015

ಕವನ

ಇರುವ ಇಲ್ಲದಿರುವ ನಡುವೆ


ಏನಿದ್ದರು
ಏನಿಲ್ಲದಿದ್ದರೂ
ಹಾಡುವವಳು ನಾ
ಬೇಟೆಯಾಡದಿರಿ
ನನ್ನ ದನಿಯ...

ಕಾರುಣ್ಯ ರಸದ 
ಹರಿವು ಬೇಡ
ನನ್ನಂತೆ ನನ್ನ 
ಹರಿಯ ಬಿಡಿ
ನಿಮ್ಮ ಆಸೆಗಳಿಗೆ
ನಾ ಕುಂತ್ತೆಂದು
ತಿಳಿಯದೆ

ಹಾಡುವವಳು ನಾ
ಕೊರಳ ಹಿಡಿಯದಿರಿ
ಉಸಿರ ಇಂಗಿಸದಿರಿ
ದೇಹದ ಸಾವಿಗಿಂತ
ಆತ್ಮದ ಸ್ತಬ್ಧತೆಗೆ 
ಸಾಯುವವಳು ನಾ

ನನ್ನ ದನಿಯ 
ಅಡಗಿಸಲು
ನಿಲ್ಲದಿರಿ ಎದುರು
ಕವಿತೆಯೋ.. ನನ್ನವು
ಹುಚ್ಚುತನವೊ..
ಒಡ್ಡುಗಳನ್ನೊಡ್ಡದಿರಿ
ನಿಮ್ಮ ಮೋಜಿಗೆ ..

ಹಾಡುವವಳು ನಾ
ಬೇಟೆಯಾಡದಿರಿ
ನನ್ನ ದನಿಯ...

08/04/2015

No comments:

Post a Comment