ಮಾಯೆಯೋ ಇಲ್ಲ ಕನಸೋ
ನಿನ್ನೊಂದಿಗಿನ ಒಡನಾಟ
ನನಗೀಗ ರೂಢಿಯಾಗಿ ಹೋಗಿದೆ
ನೀ ಬೆರಳಾಡಿಸಿದೆ
ಮೆದುಳೊಳು
ಕದಡಿ ಹೋಯ್ತು
ಸ್ಥಿರವಾಗಿ ನಿಲ್ಲದೆ
ಹೃದಯದೊಳಾಡಿದೆ
ಕರಗಿ ನಿನ್ನೆಡೆಗೇ
ಹರಿದು ಬಂತು
ಮಾಯೆ ಎನ್ನಲೆ
ಇಲ್ಲ ಇದೂ ನನ್ನ ಕನಸೇ..
ಉತ್ತರಕ್ಕಾಗಿ ಅವನಲ್ಲೇ
ನಾನುಳಿದೆ..
ವಾಪಸ್ಸಾಗದೆ...
07/04/2015
No comments:
Post a Comment