ಹೃದಯ ಹೂ ಬುಟ್ಟಿ
ಹೃದಯವೇನು
ಕಸದ ಬುಟ್ಟಿಯಲ್ಲ
ಬೇಡದ ನೋವಗಳನೇ ತುಂಬಿಕೊಳ್ಳಲು
ಎನ್ನುವವು ಸಂದೇಶಗಳು
ಹೃದಯವು ಬೇಕಾದ
ಹೂ ಬುಟ್ಟಿ
ಬಿರಿದೆದೆಯ ಹೂ ನೀನಿರಲು
ಅದರೊಳು ತುಂಬಿದೆ
ಸ್ನೇಹ ಸಹನೆ
ನಿರ್ಮಲ ಪ್ರೇಮದ ಸುಗಂಧಗಳು..
ಈ ಹೂ ಬುಟ್ಟಿಯ ತುಂಬೆಲ್ಲಾ
ಹೆಜ್ಜೇನುಗಳ ಹಾವಳಿ
ಹೃದಯದೊಳು ನಿನ್ನ ಹುದುಗಿಸಿಕೊಂಡು
ಹುಳು ಕಚ್ಚಿದ ವೇದನೆ
ಕ್ಷಮಿಸಿಬಿಡು ಎದೆಯೊಳು
ತುಸು ಆವೇಗಗಳಿದ್ದರೆ..
28/03/2015
No comments:
Post a Comment