ಸಾಲುಗಳವು ಅರ್ಥಪೂರ್ಣ
ಭಾವಗಳ ಆಳಕ್ಕಿಳಿದಾಗ,
ಆದರೆ ಕಳೆದು ಹೋಗುವ ಭಯ
ಮತ್ತೆ ಹಿಂದಿರುಗದಿದ್ದರೆ
ಸಿಲುಕಿ ನಿಮ್ಮರ್ಥದೊಳು...
***
ವಿರಹವನೂ ಅರಳಿಸುವ ಕಲೆ ಇದ್ದರೆ
ಬಹುಶಃ ಪ್ರೇಮಿಯಾದವರೇ;
ವಿರಹಕ್ಕೂ ಪ್ರೀತಿಯಾಗುವಂತೆ
ಮತ್ತೂ ಪ್ರೀತಿಸುವವರೇ!!...
***
ಹಗಲ ಬಿಸಿಲ ಬೇಗೆಯ ಮರೆಸೋ
ಈ ಸಂಜೆಯ ತಂಗಾಳಿ
ಹಿತವಾಗಿ ರಮಿಸಿರಲು
ಮನದಲ್ಲೊಂದು ಮಳೆ ಹಾಡು
ಮೈಮರೆತು ಗುನುಗೊ
ಬಲು ರೋಚಕವೀ ಕ್ಷಣಗಳು
ಉಲ್ಲಾಸದೀ ಉನ್ಮಾದದೊಳು
ಬೇಡಿದ್ದ ಕೊಡುವ ಕರ್ಣನಾದೇನೆನುತ
ವಹಿಸಿ ಮೌನ,
ಸಂಭ್ರಮಿಸುತ್ತಿರುವೆ ಈ ಏಕಾಂತವ!!
17/02/2014
No comments:
Post a Comment