Wednesday 19 February 2014

ಕವನ

ಪಾಳು ಬಿದ್ದ ಬಾವಿಗೆ ಯಾರ್ಯಾರೋ 
ಬಿಂದಿಗೆಯೊಳ ನೀರು ತುಂಬಿಸಲು ಹೊರಟಿದ್ದರು
ಮೊದಲೇ ಬಾವಿ, ಕೊಡಗಳು ತುಂಬುವುದೇ?! 
ಅವರಿವರ ಮೊಂಡಾಟಕೆ ಬಾವಿಯೇ ಅತ್ತುಬಿಟ್ಟಿತು
ತುಂಬಿಸುವವರ ಬವಣೆಗಳ ನೋಡಿ,
ಕ್ಷಣಾರ್ಧದಲಿ ಬಾವಿ ತುಂಬಿಕೊಂಡಿತು ತನ್ತಾನೇ
ಅದರದೇ ಕಣ್ಣೀರಿಗೆ;
ಬಾವಿಯದೊ ಜೀವಂತ ನೀರಿದ್ದೊಡೆಯಷ್ಟೇ
ಅದು ಸಿಹಿ ನೀರೋ ಕಣ್ಣೀರೋ
ಬಳಸಲಿಕ್ಕಿದೆ ಬಾವಿಯೊಳ ನೀರು
ಸಾಮರ್ಥ್ಯಗಳಲಿ ಬದಲಾವಣೆಯಿರಬಹುದು
ಆದರೆ ಯಾರೂ ಅಸಮರ್ಥರಲ್ಲ ತಮ್ಮ ಜೀವನಕೆ... 

{ಯಾವುದನ್ನೇ ಆಗಲಿ ತಿರಸ್ಕರಿಸುವ ಮುನ್ನ ಯೋಚಿಸುವ ಅಗತ್ಯವಿದೆ}


18/02/2014

No comments:

Post a Comment