Wednesday 19 February 2014




ದೊಡ್ಡ ತೆರನಾಗಿ ನೋಡುವ 
ದೊಡ್ಡ ಮನಸ್ಸಿನವ,
ನಿನ್ನತನಕೆ ಸಾಗರ ಸರೋವರಗಳು 
ಹೋಲಿಕೆಯೇ ಅಲ್ಲ,
ಅವುಗಳ ಭರಿಸೋ ಮೋಡದ ಕೋಟೆ
ನಾ ಕೊಟ್ಟ ಹೋಲಿಕೆಯೇ ಸರಿಯಲ್ಲವೇ ನಿನಗೆ? 
ಒಮ್ಮೆ ಕರಗಿ ತೊಯ್ಯಿಸುವೆ ನನ್ನ, 
ಒಮ್ಮೆ ಹರಡಿ ತೋರುವೆ ವಿಶಾಲ
ಮತ್ತೊಮ್ಮೆ ಮಗದೊಮ್ಮೆ ಸುರಿಸಿ ಪ್ರೀತಿ ಸೋನೆ 
ಸದ್ದಿಲ್ಲದೆ ನನ್ನೊಳು ಜಿನುಗಿಸುವೆ ಕಂಬನಿ ನೀನೆ!


***


ಭರವಸೆಗಳು ಬೇಕು ಬದುಕಲಿ
ಭಾರವಾದ ಹೃದಯ ಹೊರಿಸಿ
ಕಣ್ಕಟ್ಟಿ ಕಾಡೊಳಗೆ ಬಿಟ್ಟರೂ
ನಂಬಿದವರು;
ತಿರುಗಿ ಬಂದೊಮ್ಮೆ ಕಂಣ್ಣರಳಿಸಿ ನೋಡುವರು
ನಾ ಕಣ್ಣಿದ್ದೂ ಇಲ್ಲದಂತೆ ನಡೆಯಲು
ಒಗ್ಗಿಸಿಕೊಂಡ ಹೊಸ ಕಲೆಯನ್ನು
ಮರವ ತಬ್ಬುವ ಬಳ್ಳಿಯಂತೆ
ಈ ಮೂಕ ಬದುಕು ಗುರುವೇ... 


16/02/2014

No comments:

Post a Comment