Wednesday, 26 February 2014

ಕವನ


ಯಾರೋ ನಡೆದು ಬಂದ ಹಾದಿಯನ್ನೇಕೆ
ನಾ ಹೋಗಿ ನೋಡುವ ಆಸೆಯಾಯಿತೋ?
ಆ ಹಾದಿಯೊಳು ನಲಿವಿದ್ದರೂ 
ಹೆಚ್ಚು ಬಾದಿಸಿದ್ದು ವಿರಹದ ಕುರುಹುಗಳು

ವಿಹರಕ್ಕೆ ಹೆದರುವ ನಾ 
ಬಯಸಿದ್ದೂ ಪ್ರೀತಿಸಿದ್ದೂ ಹೆಚ್ಚು ವಿರಹವೇ, 
ಪ್ರೀತಿಗಿಂತ;
ಆದರೂ ಅವರಿವರ ಭಗ್ನ ಪ್ರೇಮಗಳ ಕೇಳಲಾರೆ, 
ನೋಡಲಾರೆ;
ಅರಗಿಸಿಕೊಳ್ಳಲಾರೆ

ಅದೆಷ್ಟೋ ಕನಸುಗಳ ಮಾತುಗಳು
ಮೌನದಿ ಕರಗಿದವೋ ಆ ಹಾದಿಯೊಳು
ಅಂದಾಜಿಸಲಾರೆ;
ಪ್ರಶ್ನೆಗಳೇಳುತ್ತವೆ ಈ ನನ್ನದೇ ಕುತೂಹಲಾಸಕ್ತಿಗಳಿಗೆ
ಸುಮ್ಮನೇಕಲೆಯುವೆಯೆಂದು

ಇಲ್ಲ ನಿಲ್ಲದೀ ಮನವು ಹಾತೊರೆವ ಜಾಲ ಹಿಡಿವವರೆಗೂ
ನೋವೇ ಸಿಗಲಿ, ಇಲ್ಲ ಅದು ನೋವೇ ಎಂದು ಖಾತ್ರಿಯಾಗಲಿ
ಹತ್ತಿರಾಗದೇ ಯಾವುದು ನಮ್ಮಂತರಂಗಕ್ಕೆ ನಿಲುಕದು
ತುಸು ನಲುಗಿದರೂ ಮನವು ದಿಟವನ್ನೇ ಒಪ್ಪುವುದು

ಧೈರ್ಯ ಬೇಕಷ್ಟೇ ತಿಳಿದು ಉಳಿಯಲು
ಮತ್ತೊಮ್ಮೆ ಬಂಡತನವ ಮೆರೆಯಲು...


19/02/2014

No comments:

Post a Comment