ನೀ ನಲಿವಾಗ ನಾ,
ನಾ ನಲಿವಾಗ ನೀ,
ಎಲೆಮರೆಯಲಿ ಅವಿತು,
ನೋಡಿ ಆನಂದಿಸುವುದೇಕೆ?
ಬಾ ಒಟ್ಟಿಗೆ ಹಾರಿ,
ಬಾನಂಗಳದಿ ನಲಿಯೋಣ,
ಹಾರುವಾಗ ನೋಡಿಯಾರು ಜನ;
ಯಾರೂ ಹಿಡಿಯಲಾರರು
ಭಯ ಬೇಡ ನಾನಿರುವೆ!,
ನಿನ್ನೊಂದಿಗೆ............ :-)
***
ನಾ ಗರಗಸವಲ್ಲ
ನೀ ಹಾಗಿರುವೆ ನನ್ನೊಡನೆ
ಬಂದು ಹೋಗಲಾರದೇ
ಉಳಿದವಳು ನಾನು
ನನ್ನ ಕಂಡಾಗ ಓಡುವವನು ನೀನು
ನಿನ್ನ ಅಕಾರಣ ಮೌನವೇ
ನಮ್ಮಿಬ್ಬರ ಯಾತನೆ
ಮೌನ ಬಿಟ್ಟು ಮಾತು ಕೊಟ್ಟು
ಗರಗಸವ ಸರಿಸೆಯಾ?
09/11/2013
No comments:
Post a Comment