ಕಲ್ಪನೆಗಳು ಹೆಚ್ಚಾದಂತೆ
ಕವಿಯಾದ;
ಅದರೊಳು ಸುಳ್ಳೇ ತುಂಬುತ್ತಿದ್ದಂತೆ
ನಿಜ ಪ್ರೇಮಿಯಾದ!
***
ಮಳೆಯಲಿ ನೆನೆದ ತನುವು
ಮೊಳೆಕೆ ಹೊಡೆದದ್ದು ಹೃದಯದಲಿ
ಮಳೆಹನಿಗಳ ಗುರುತುಗಳಾಗಿ
ನಿನ್ನ ನೆನಪಿನ ಹನಿಗಳಾಗಿ
***
ಈ ಕಣ್ಣೋಲೆ ಗರಿಗಳ ಮೇಲೆ
ಬರೆದ ನಿನ್ಹೆಸರ
ನಾನೋದಲೇ
ನಿನ್ನ ಕಣ್ಣೆವೆಗಳೊಳಗೆ?!
***
ಮುನಿದವರಿಗೂ
ನಾನೊಂದು ನೆನಪು
ಮುನಿದಿದ್ದ ಕಾಲಾವಧಿಯೊಳಗೆ!
***
ಮೂರು ದಿನಗಳ
ಬಿಸಿಲಿನ ಜಳಕ್ಕೆ ಸೋತು,
ಹಿತವಾದ ನೆರಳು-ತಂಪನ್ನು
ಬೇಡಿದ್ದು ನಿಜವೇ,
ಇಂದು ವರುಣನೊಲಿದು
ಜಡಿ ಮಳೆಯಲಿ ನೆನೆದು
ಮಾಡಬೇಕಾಯ್ತು ಗಣತಿ ಕಾರ್ಯ
ಏನಾದರೂ ಸರಿಯೇ,
ಮನಸಾರೆ ಬೇಡಿದ್ದು;
ಬೇಡಿದ್ದಕ್ಕಿಂತ
ಹೆಚ್ಚೇ ದೊರೆಯುವುದಂತು ನಿಜವೇ.. !
***
ನನ್ನ ಮಾತನ್ನಾಲಿಸಿದ ಮಾತ್ರಕ್ಕೆ
ನನ್ನ ಭಾವ ಕದಿಯಲಾರಿರಿ!
ಮಾತಿನೊಳ ಭಾವ, ಭಾವದೊಳ ಮಾತು
ಅರ್ಥವಾದರೂ ನನ್ನಂತೆ ನೀವಲ್ಲ
ನನ್ನ ಬದುಕಿಗೆ ನನ್ನಷ್ಟು ಹತ್ತಿರದವರ್ಯಾರು ಇಲ್ಲ!
16/11/2013
No comments:
Post a Comment