Monday, 4 November 2013


ಹಾಗೇ ಸುಮ್ಮನೆ............. :-)



ನಾ ಕಂಡ ಕನಸು ಹೆಣೆದ ಕಲ್ಪನೆ ನೀನಲ್ಲ
ಅದರೊಳಗೆ ನಿನ್ನ ಆಹ್ವಾನಿಸಿ ನೋಡಿದೆಯಷ್ಟೇ
ಏನಾಶ್ಚರ್ಯ!, ನಿನ್ನ ಕನಸೋ ಎಂಬಂತೆ ಹೊಂದಿಕೊಂಡೆಯಲ್ಲ
ನಿನಗೂ ಮುಂಚೆ ನನ್ನ ಕನಸು ಕಲ್ಪನೆಗಳ ಅರಿವಿತ್ತೇ
ನನ್ನ ನೋಡದೆ ನನ್ನಂತರಂಗ ತರಂಗಗಳು ನಿನ್ನ ಮುಟ್ಟಿತ್ತೇ?
ಗಾಳಿ ಗೆಳೆಯನೇ, ಇನ್ನಾದರೂ ಶಬ್ದಗಳಿಗೆ ದನಿಯಾಗೆಯಾ?



***



ಪ್ರೀತಿ ಗಳಿಸುವುದು ಸುಲಭ

ಉಳಿಸಿಕೊಳ್ಳುವುದು ತುಸು ಕಷ್ಟ
ಪ್ರೀತಿಯಿಲ್ಲದಿರೆ! 


03/11/2013

No comments:

Post a Comment