ತೇಲುವ ಚಂದಿರನ ತಂಪು
ದಣಿದ ಕಣ್ಗಳ ನಿದಿರೆಯ ಜೊಂಪು
ಜೊತೆಗೆ ನಿನ್ನ ನೆನಪು!!
***
ತಂಗಾಳಿ
ಸವಿಯಲು
ಬೇಗೆಯು
ಕಾಡಿರಬೇಕು
***
ಪ್ರೀತಿ ಕನಸಲಿ ಬಂದು
ಹೇಳಿತು
ನೀನೊಂದು
ಪೆದ್ದು;
ಅದಕೆ ನಾ ಕೊಟ್ಟೆ
ಪ್ರೀತಿಲಿ
ಒಂದು ಗುದ್ದು
***
ಸೊಂಪಾದ ನೆನಪುಗಳ ರಾಶಿಯಲಿ
ನಿನ್ನ ಬಿಂಕವೇ ಹೆಚ್ಚು ಎದ್ದು ಕಾಣುವುದು
***
ಮನವರಳಿದ ಸದ್ದು
ಹೂವರಳಿದ ಸದ್ದಿಗೂ
ಕ್ಷೀಣ!
***
ಮನಸ್ಸಿನ
ವಯಸ್ಸಿಗನುಗುಣವಾಗಿ
ಸಪ್ಪೆ ಎನಿಸಿದ ಕಾವ್ಯವೂ
ಮುಂದೊಮ್ಮೆ ರುಚಿಸುವಂತೆ
ಒಬ್ಬ ಕೃತಿಕಾರ
ಅದೇ ಪೀಳಿಗೆಯ
ಗೆಲ್ಲಲೇಬೇಕೆಂದಿಲ್ಲ!
***
ಮುಗಿಲಿದ್ದಷ್ಟೂ ಹರಡಿಕೊಳ್ಳದು ಮೇಘವು
ಹಾಗೇಯೇ ಮನದ ಹರವಿನೊಳ ಪ್ರೀತಿ
ಎಲ್ಲೋ ಮನದ ಮೂಲೆಯೊಂದೆಡೆ ಕಾಡಬೇಕು ನೀರವತೆ!
14/11/2013
No comments:
Post a Comment