Friday, 8 November 2013


ಸಮಯವಿಲ್ಲ ಗೆಳೆಯಾ,
ಈಗೀಗ ನಿನ್ನ ನೆನೆಯಲೂ,
ಲೆಕ್ಕಾಚಾರದ ಬದುಕಾಗಿ ಬಿಟ್ಟಿದೆ,
ಒಂದು ಕ್ಷಣ ಮೈಮರೆತರೂ
ಉತ್ತರಿಸಬೇಕಿದೆ ಬದುಕಿಗೆ

ನೀ ತಿಳಿದಷ್ಟು ಸೊಗಸಲ್ಲ ನಾನು,
ಒರಟು ಕೊಂಬೆ, ಬಂಡ ಕಲ್ಲು,
ನಿನ್ನ ನೋಡಿ ಆಗಾಗ ಕರಗುವ ಮೇಣ!
ನಿನ್ನ ಕಾಡುವ ನಾನೀಗ ಇಂಚಿಂಚೇ ದೂರ
ಖುಷಿಯಿರಬೇಕು ನಿನಗೆ ಸಿಕ್ಕ ಸ್ವಾತಂತ್ರ್ಯಕೆ 

07/11/2013


No comments:

Post a Comment