Monday, 18 November 2013


ಈ ಮಳೆ,,, ಚಳಿ,,,

ಇವೆಲ್ಲಾ ನಿನ್ನ ಹಾಡುಗಳು,
ಒಮ್ಮೊಮ್ಮೆ ನಾನೂ ಗುನುಗುವೆನಷ್ಟೇ
ನಿನ್ನ ನೆನಪಲಿ!


***


ಸೋತ ಮನಕೆ ಬೇಕು

ಮಡಿಲು
ಇಲ್ಲವೇ ಪ್ರೇಮಿಯ
ಹೆಗಲು


***


ಏನೆಲ್ಲಾ ಸಿಹಿ ತಿಂಡಿಗಳ ತಿಂದರೂ

ನನ್ನಜ್ಜ ತಂದು ಕೊಡುತ್ತಿದ್ದ
ಕಡು ಮಣ್ಣಿನ ಬಣ್ಣದ ಬಿಳಿ ಪುಡಿ ಮೆತ್ತಿದ
ಆ ತರ ತರ ಆಕಾರದ ಉಂಡೆಗಳೇ
ಈಗಲೂ ಪ್ರಿಯ ನೆನಪು
ಬಾಯಲ್ಲಿ ನೀರೂರಿಸುವುದು
ಈಗ ನನ್ನಜ್ಜನ ನೆನಪು ನಂದಿನಿ ಪಾರ್ಲರ್ನಲ್ಲಿ
ಧಾರವಾಡ ಪೇಡೆ ಸವಿಯುತಾ...........!

***

ಹೊಳೆಯುವ ಪಾದರಸವು 
ಕ್ರಿಯಾಶೀಲತೆಯಿದ್ದರೂ ಜೀವವಲ್ಲ,
ಜೀವದೊಂದಿಗೆ ಬೆರೆತರೆ ಜೀವವಿಲ್ಲ,
ಆದರೂ ಹೇಳ್ವರು
ಇರಬೇಕು ಪಾದರಸದಂತೆ,
ಭಾವದಂತೆ ಬಾಳ್ವೆ!


18/11/2013

No comments:

Post a Comment