Tuesday, 5 November 2013


ಅವಳ ನಿರ್ಮಲ ಪ್ರೀತಿಗೆ
ಅವನೊಂದು ಸುಳ್ಳಿನ ಕವನ
ಹಾಡಿ ಹಾಡಿ ಕೊನೆಗೂ ಮರೆತಳು ಅವನ
ಹಿಡಿದಳು ಹಾಡಿನ ವ್ಯಸನ 


***


ಸುಳ್ಳು ಕಪಟಗಳಿಂದ
ಗಳಿಸಿದ ವಿಶ್ವಾಸ 
ಸತ್ಯದ ಬೆಳಕಲಿ
ಬಣ್ಣ ಕಳೆದುಕೊಂಡಿತು 

***


ಅವಳು ಕಿವಿ ಹಿಂಡಿ ಕೀಟಳೆ ಮಾಡಿ
ಮಾತನಾಡುವಾಗಲೇ ಅನಿಸಿತ್ತು
ಅವನೆಷ್ಟು ಅವಳಿಗಾಗಿ ಬಾಗಿ
ಅವಳನ್ನು ಎಂದೋ ಬಯಸಿದ್ದನೆಂದು 

***


ದೀಪ ಹಚ್ಚಲು ಕತ್ತಲಾಗಲೇ ಬೇಕಿಲ್ಲ
ಹಗಲಲೂ ದೀಪ ಬೆಳಗುವುದು ಎಂದಿನಂತೆ
ಆದರೆ ಅರಿವಿಗೆ ಬರುವುದು ಕತ್ತಲೆಯಲಿ ಮಾತ್ರ

05/11/2013


No comments:

Post a Comment