Friday, 15 November 2013


ಕವಿಯೆಂದರೆ?
ಕವಿ;
ನಾನು, ನೀನು ಮತ್ತು ಈ ಜಗತ್ತು
ಭಾವವನ್ನು
ಅಭಿವ್ಯಕ್ತಿಸುವಂತಹ
ಎಲ್ಲವೂ!


***


ಮನಸ್ಸು ಮನಸ್ಸನ್ನೋದಲು
ಶುರುವಿಟ್ಟಾಗ
ಮೌನ ಸಂಭಾಷಣೆ
ಹುಟ್ಟಿತಾಗ! 


***


ಹಾಗೇ ಸುಮ್ಮನೆ........ 



ಅವಳ ನಾಚಿಕೆಗಳು
ಅವಳ ಬೆರೆಳಕ್ಷರದ
ಮಿಂಚಿನಲಿ
ಮಿಂಚಿ
ಮರೆಯಾದವು
ಅವನ ಕಣ್ಣೊಳುಳಿದು!


***

ಜೋಪಾನ ಗೆಳೆಯ,
ನನ್ನ ಮಾತುಗಳಲ್ಲ
ಅವು;
ನನ್ನೆದೆಯ ಮಿಡಿತಗಳು
ನಿನ್ನೆಡೆಗಿನ ತುಡಿತಗಳು 


***


ಸುಖದ ಊರುಗಳನ್ನೆಲ್ಲಾ
ಸುತ್ತಿ ಬಂದವನಿಗೆ
ಸುಖವು ಸುಖವಾಗಿರದೆ
ಮತ್ತೇನಕ್ಕೋ ಹಂಬಲಿಸುವಂತಾದದ್ದು
ದುಃಖವೇ ಇರಬೇಕು!

ಮನುಜನ ಮನಕ್ಕೆ ಹಂಬಲವಷ್ಟೇ 
ಸತ್ಯ;
ಮಿಕ್ಕಂತವು ಸುಖ-ದುಃಖಗಳೆಂದು
ಕರೆಯಿಸಿಕೊಳ್ಳಬಹುದು!

ನಿರಂತರ ತುಡಿತಗಳು..
ಸ್ನೇಹ, ಪ್ರೇಮ ಮತ್ತು ಮೋಹಕ್ಕಾಗಿ
ಮಮತೆಯ ಮಡಿಲಿಗಾಗಿ
ಒಂದು ಸಿಕ್ಕರೆ ಮತ್ತೊಂದಕ್ಕೆ
ಸುಖದ ದಾಸನಲ್ಲ ಮನುಜ
ಹಂಬಲಗಳ ಆಶ್ರಯಿ!!


***


ಬೇಸರದ ಸಂಗತಿ ಎಂದರೆ;
ಬೇಸರವೆನ್ನುತ್ತಿದ್ದಂತೆಯೇ
ನಿದ್ದೆ ಬರುವುದು! 



15/11/2013

No comments:

Post a Comment