Monday, 4 November 2013


ಪ್ರೀತಿ ಪ್ರಿಯವಾದುದು
ನೀ ಸಿಕ್ಕ ಮೇಲೆ
ನಾ ತೇಲಿ ಹೋದದ್ದಾದರೂ
ನಿನ್ನ ಕಲ್ಪನಾ ಸಾಗರದ ಮೇಲೆ
ನಿನ್ನ ತುಂಬಿಕೊಂಡ ಕಣ್ಣಿಗೀಗ
ವಾಸ್ತವ ಕಹಿಯಾಗಿದೆ ಕಣ್ಬಿಟ್ಟ ಮೇಲೆ
ಏನಿದ್ದರೂ ಇಲ್ಲದಂತೆ
ನೀನಿಲ್ಲದ ಮೇಲೆ,
ಪ್ರೀತಿ ಇಲ್ಲದ ಮೇಲೆ
ಎದುರು ಮನೆಯ ಪ್ರೀತಮ್ ಕಾಣದಿದ್ದ  ಮೇಲೆ!! 


***


ಸುಳ್ಳಿನ ಸಾಗರದಲಿ ಸತ್ಯದ ಮೀನು
ಒಂದರೊಳಗೊಂದು ಬಲೆ ಬೀಸಿ ಹಿಡಿಯಬೇಕು


***


ನಾ ಸುಳ್ಳಾಡುವ ಕವಿಯಾದೆ
ನನ್ನವಳು ಅದ ಕೇಳದೆ ಮೌನಿಯಾದಳು


04/11/2013


ನಿನ್ನ ಕೈಯೊಳ ದೀಪ
ನನ್ನೊಳ ಪ್ರತಿಬಿಂಬ


02/11/2013


No comments:

Post a Comment