Wednesday, 13 November 2013

ದೇಹದ ದಣಿವಿಗೆ
ಮನದ ಕ್ಷೋಬೆಗೆ

ಅವನೊಲವ ಆಸರೆ
ಸವಿ ಮಾತಿನ ನೆನಪೇ
ನನ್ನ ಚೈತನ್ಯ


***


ಪ್ರೀತಿ ಪ್ರೇಮಕ್ಕಿಂತ 
ಪ್ರಣಯಕ್ಕೇ ಹೆಚ್ಚು ಮೆಚ್ಚುಗೆ
ವಿರಹಕ್ಕೆ ಬೆಚ್ಚಿ ಪಕ್ಕಕೆ
ಮಿಕ್ಕಂತೆ ಎಲ್ಲಕೂ ಬರೀ ನೋಟಕೆ  


***


ಚಳಿಗಾಲದ ಮಳೆಯಲಿ
ಪ್ರಣಯದ ಹನಿಗಳು
ನಡುಗುತಾ ಗುಡುಗುವವು
ಸದ್ದಿಲ್ಲದೆ ಮಿಂಚುವವು!


***


ನಾ ಮೊದಲಿನಂತಾಗಬೇಕಿದೆ
ಅಳು ಬಂದಾಗ ಅತ್ತು
ನಗು ಬಂದಾಗ ನಕ್ಕು
ಹಗುರಾಗಬೇಕಿದೆ 

13/11/2013

No comments:

Post a Comment