ಅವನೆದೆಯಲಿ ನನ್ನೆಡೆಗೊಂದು
ನಲುಗದ ಸುಂದರ ಭಾವ
ಬಹುಶಃ ಪ್ರೀತಿಗೂ ಮೀರಿದ್ದು!!
***
ಸುಂದರ ಕನಸುಗಳಲಿ ಕಣ್ಣು ತುಂಬಿತ್ತು ಆ ದಿನ
ಕಣ್ಬಿಡಲಾರದೇ ಮುಳುಗಿದವಳ ಮುಖದಲಿ ಮಂದಸ್ಮಿತ
ನಗುನಗುತಾ ಅತ್ತಿದ್ದು, ಅಳು ಅಳುತಾ ನಕ್ಕಿದ್ದು
ಬಹುಶಃ ಆ ದಿನವೇ ಅವಳ ಜೀವನದಲಿ ಮೊದಲು
ನೆನೆಯಲೂ ಎಂದೆಂದಿಗೂ ರೋಮಾಂಚನವಾ ಕ್ಷಣಗಳು!!
***
ಆತ್ಮವಿಶ್ವಾಸ ಯಾರ ಮನೆಯ ಗಂಟು?
ಅಂದುಕೊಂಡರೆ ನನ್ನದೇ;
ಇಲ್ಲದಿದ್ದರೆ ಅವರಿವರ ಭಾಷಣದ 'ನಾನು'
ನಮ್ಮೆದುರಿಗಿನ ಅವರ 'ಅಹಂ',
***
ನನ್ನದೆಲ್ಲಾ ಭ್ರಮೆಯೇ ಎಂದೆನಿಸಿದಾಕ್ಷಣದಿಂದ
ಜೀವನವು ಅಲ್ಲಿಂದಲೇ ಪ್ರಾರಂಭಿಸುವುದು ಕೊನೆಗೊಳ್ಳಲು
***
ನಿನಗೆ ಕುಹುಕವಾಡಿ
ನನಗೆ ಸುಖವುಂಟೇ?!
ಹುಡುಕದಿರು ನಿನ್ನನು
ನನ್ನ ವಿಷಾದದ ಮಾತುಗಳಲಿ
ಸಂತಸಗಳಲ್ಲಷ್ಟೇ ಕಾಣಬಯಸುವೆ ನಿನ್ನನು
ಮರೆತಿರುವೆ ನಿನ್ನ, ನನ್ನ ವಿಷಾದಗಳಲಿ
***
ಹಾಗೇ ಸುಮ್ಮನೆ .... :-)
ಕೋಪವಿದ್ದಾಗಲೂ
ಪ್ರೀತಿ ಇರುತ್ತೆ;
ಆದರೆ ಸ್ವಲ್ಪ
***
ಮಾತಲಿ ಕೆಣಕಿ ಛಲ ಹುಟ್ಟಿಸಬೇಡ
ತಿಳಿದೂ ನನ್ನರ್ಧ ಕ್ರಿಯೆ ನೀನೆಂದು!
***
ಬದುಕಿನ ವೇಗಕ್ಕೆ ಹೊಂದಿಕೊಳ್ಳದ ಹೊರತು
ಆಯ ತಪ್ಪಿ ಹಿಂದೆ ಬಿದ್ದ ನೋವಿನ ಮೂಟೆಗಳಾಗಿಬಿಡುತ್ತೇವೆ
ಬಾಳ ಹಾದಿಯಲಿ!
12/11/2013 :-)
No comments:
Post a Comment