"ಗುರು"
ಒಂದೇ ಒಂದು ಅಕ್ಷರವನ್ನು ಕಲಿಸಿದ್ದರೂ ಅವರನ್ನು ಗುರುಗಳಂತೆ ಕಾಣಬೇಕಂತೆ. ಮನುಷ್ಯ ತಾನು ಹುಟ್ಟಿನಿಂದ ಕೊನೆಯ ತನಕವೂ ಒಂದಲ್ಲ ಒಂದನ್ನು ತಾವು ಸಂಧಿಸಿದ ವ್ಯಕ್ತಿಗಳಿಂದ ಕಲಿಯುತ್ತಲೇ ಇರುತ್ತಾನೆ. ಹಾಗೆಯೇ ನನಗೂ ಅದೆಷ್ಟೋ ಜನ ಗುರುಗಳು. ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣದಲ್ಲಿನ ಗುರು ಹಿರಿಯರು. ಔಪಚಾರಿಕ ಶಿಕ್ಷಣದಿಂದಾಚೆಗಿನ ಮಾರ್ಗದರ್ಶಕರು. ಹೀಗೇ ಮುಂದುವರೆದು ಈಗ ಫೇಸ್ ಬುಕ್ಕಿನ ಶಾಲಾ ವಿದ್ಯಾರ್ಥಿಯಾದ ನನಗೆ ಇಲ್ಲಿನ ಹಿರಿಯ ಕಿರಿಯ ಗೆಳೆಯರೂ ನನಗೆ ಪಾಠ ಕಲಿಸುವ ಶಿಕ್ಷಕರಂತೇ ಕಾಣುತ್ತಾರೆ. ಹೌದು ಫೇಸ್ ಬುಕ್ಕಿಗೆ ಯಾವುದೇ ಉದ್ದೇಶವಿಲ್ಲದೆ ಮನಸ್ಸಿಗೊಂದು ಬದಲಾವಣೆ ಸಿಗಲಿ ಎಂಬ ಭಾವದಲ್ಲಿ ನಾನು ಬಂದದ್ದು. ಬಂದ ತುಂಬಾ ದಿನಾ ಇಲ್ಲಿ ನನ್ನದೇನು ಪಾತ್ರವಿರಲಿಲ್ಲ. ಏನ್ ಮಾಡ್ಬೇಕು ಅಂತನೂ ಗೊತ್ತಿರಲಿಲ್ಲ ಬಿಡಿ........... :-)
ಓದುವ ಹವ್ಯಾಸವನ್ನಷ್ಟೇ ಹೊಂದಿದ್ದ ನನಗೆ ಬರೆಯುವಂತೆ ಪ್ರೇರೇಪಿಸಿದ ಗುರುವೂ ಸಿಕ್ಕರು. ಈಗ ಬರವಣಿಗೆಯ ಹಾದಿಯಲ್ಲಿ ದಾಪುಗಾಲಿಡುತ್ತಿರುವೆ.
ಕಾಲ ಎಲ್ಲಿಂದ ಎಲ್ಲಿಗೋ ದಾರಿ ಬದಲಿಸಿದೆ. ಕಲಿಯುವ ಆಸಕ್ತಿಯೊಂದು ಮಾತ್ರ ನನ್ನ ನಿರಂತರ ಸಂಗಾತಿ......... :-)
ತಮ್ಮೆಲ್ಲರಿಗೂ ಧನ್ಯವಾದಗಳು.
ಶಿಕ್ಷಕರ ದಿನದ ಶುಭಾಶಯಗಳು :-)
ನಾಳೆ ಬೆಳಗ್ಗೆಯಿಂದಲೇ ಬ್ಯುಸಿ ನಾನು ಹಾಗಾಗಿ ಈಗಲೇ ಶುಭಾಶಯ ಕೊರುತ್ತಿರುವೆ.

ಚಿಕ್ಕವರಿರಲಿ, ದೊಡ್ಡವರಿರಲಿ ಅವರಿಂದ ಕಲಿತ ಜೀವನದ ಪಾಠಗಳು ಗುರುಭೋಧನೆಗೆ ಸಮಾನ.
ReplyDeleteಹೌದು ಸರ್. ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ :-)
ReplyDelete