"ನಿಟ್ಟುಸಿರು"
ಪ್ರತೀ ವರ್ಷದ ಗೌರಿ ಹಬ್ಬಕೂ
ಅವಳೊಳಗೇ ಬೆಂದ ನಿಟ್ಟುಸಿರು
ತನಗಾಗದಿದ್ದ ಆ
ಮೊದಲ ಗೌರಿ ಹಬ್ಬವ ನೆನೆದು
ಮದುವೆಯಂದೇ ಮುರಿದ ಮನವು
ತಿಂಗಳೊಳಗೇ ಮುರಿದ ಬಂಧವು
ಘಾಸಿಗೊಳಿಸಿದ್ದು ಅವಳನು ಮಾತ್ರ
ಕೊನೆಪಕ್ಷ ತೋರಿಕೆಗಾದರೂ
ನಡೆಸಲಿಲ್ಲ ಬಂಧದಂತಹ ನಾಟಕವ....
ಎಷ್ಟೇ ಮರೆತರೂ
ತಟ್ಟನೆ ಹನಿ ಮಿಡಿದು
ನಿಡುಸುಯ್ವಳು
ಎಲ್ಲರಂತೆ ತನಗಿಲ್ಲ ಹೆಸರಿಗಾದರೂ
ಒಂದು ಗೌರಿ ಹಬ್ಬ.
-ದಿವ್ಯ ಆಂಜನಪ್ಪ
೦೮/೦೯/೨೦೧೩
(ಹತ್ತಿರದಿಂದ ನೋಡಿದ ಗೆಳತಿಯ ವ್ಯಥೆ)
ಪ್ರತೀ ವರ್ಷದ ಗೌರಿ ಹಬ್ಬಕೂ
ಅವಳೊಳಗೇ ಬೆಂದ ನಿಟ್ಟುಸಿರು
ತನಗಾಗದಿದ್ದ ಆ
ಮೊದಲ ಗೌರಿ ಹಬ್ಬವ ನೆನೆದು
ಮದುವೆಯಂದೇ ಮುರಿದ ಮನವು
ತಿಂಗಳೊಳಗೇ ಮುರಿದ ಬಂಧವು
ಘಾಸಿಗೊಳಿಸಿದ್ದು ಅವಳನು ಮಾತ್ರ
ಕೊನೆಪಕ್ಷ ತೋರಿಕೆಗಾದರೂ
ನಡೆಸಲಿಲ್ಲ ಬಂಧದಂತಹ ನಾಟಕವ....
ಎಷ್ಟೇ ಮರೆತರೂ
ತಟ್ಟನೆ ಹನಿ ಮಿಡಿದು
ನಿಡುಸುಯ್ವಳು
ಎಲ್ಲರಂತೆ ತನಗಿಲ್ಲ ಹೆಸರಿಗಾದರೂ
ಒಂದು ಗೌರಿ ಹಬ್ಬ.
೦೮/೦೯/೨೦೧೩
(ಹತ್ತಿರದಿಂದ ನೋಡಿದ ಗೆಳತಿಯ ವ್ಯಥೆ)
No comments:
Post a Comment