ಹೆಣೆದ ಎಷ್ಟೋ ಭಾವಗಳು
ಪೂರ್ಣವಾಗದೇ ಉಳಿದಿರಬಹುದು
ಬರೆದ ಸಾಲುಗಳು ಕೂಡ;
ಜೀವನವೂ ಹಾಗೆಯೇ ಎನಿಸುವ ಕ್ಷಣಗಳೆಷ್ಟೋ?!
ಎಲ್ಲೋ ನೂಕುತ್ತ, ಮತ್ತೆಲ್ಲೋ ಕುಂಟುತ್ತ
ಇನ್ನೆಲ್ಲೋ ವಾಲುತ್ತ ತರಗೆಲೆಯಾಗಿ ಹಾರಿ
ಮಳೆಯಲಿ ತೊಯ್ದು, ರಪ್ಪನೆ ಬಂಡೆಗೆ ಬಡಿದು
ಕೆಲಕಾಲ ಕಲ್ಲಿಗೆ ಕಲ್ಲಾಗಿ ನಿಂತು,
ಬಿಸಿಲ ತಾಕುತ್ತಲೇ ತೇವವಾರಿ
ಮತ್ತೆ ಗಾಳಿಗಾರುವ ನಿರಂತರ ಸಂಚಾರಿ
ಒಮ್ಮೆ ದಿಕ್ಕಾಗಿ ಮತ್ತೊಮ್ಮೆ ದಿಕ್ಕೆಟ್ಟು.......
25/09/2013
ಪೂರ್ಣವಾಗದೇ ಉಳಿದಿರಬಹುದು
ಬರೆದ ಸಾಲುಗಳು ಕೂಡ;
ಜೀವನವೂ ಹಾಗೆಯೇ ಎನಿಸುವ ಕ್ಷಣಗಳೆಷ್ಟೋ?!
ಎಲ್ಲೋ ನೂಕುತ್ತ, ಮತ್ತೆಲ್ಲೋ ಕುಂಟುತ್ತ
ಇನ್ನೆಲ್ಲೋ ವಾಲುತ್ತ ತರಗೆಲೆಯಾಗಿ ಹಾರಿ
ಮಳೆಯಲಿ ತೊಯ್ದು, ರಪ್ಪನೆ ಬಂಡೆಗೆ ಬಡಿದು
ಕೆಲಕಾಲ ಕಲ್ಲಿಗೆ ಕಲ್ಲಾಗಿ ನಿಂತು,
ಬಿಸಿಲ ತಾಕುತ್ತಲೇ ತೇವವಾರಿ
ಮತ್ತೆ ಗಾಳಿಗಾರುವ ನಿರಂತರ ಸಂಚಾರಿ
ಒಮ್ಮೆ ದಿಕ್ಕಾಗಿ ಮತ್ತೊಮ್ಮೆ ದಿಕ್ಕೆಟ್ಟು.......
25/09/2013
ಬದುಕು - ಭಾವ - ಬರಹ ಎಲ್ಲ ತರಗೆಲೆ...
ReplyDeleteಚಂದದ ಹೋಲಿಕೆ...
ಇಷ್ಟವಾಯಿತು...:)
ಧನ್ಯವಾದಗಳು ವತ್ಸ :-)
Delete