Saturday, 7 September 2013

"ಗುಲಾಬಿ ಹೂ"

ಗುಲಾಬಿಯ ಅರಸಿ ಬಂದ ರಸಿಕ
ಮುಳ್ಳು ತಾಗಿ ಚೀರಿಕೊಂಡ ಬಳಿಕ
ಮರುಗಿ ಹೇಳಿತು ಗುಲಾಬಿ ಹೂ
ಪ್ರಿಯನೇ, ಮುಳ್ಳುಗಳಿರುವವು
ನನ್ನ ಒಂಟಿ ಅಸ್ತ್ರಗಳು
ತೋರಿಕೆಯ ಬಿರುನುಡಿಗಳು
ಪ್ರೀತಿಯ ಮೃದುತ್ವ
ನಿನ್ನ ಬೆರಳಿಗಿಳಿದರೆ
ಮೀರಬಲ್ಲೆ ನನ್ನ ಒರಟುತನವನು
ನಿನ್ನನೇ ಧ್ಯಾನಿಸಿದ ನವಿರು ಪಕಳೆಗಳು
ಕಾದಿವೆ ನಿನ್ನ ಕೈ ಸೇರಲು
ಬಯಸಿ ಅಧರಗಳ ಆಲಿಂಗನಕೆ.

-ದಿವ್ಯ ಆಂಜನಪ್ಪ :-)

೦೭/೦೯/೨೦೧೩

No comments:

Post a Comment