Friday, 27 September 2013

ಹಾಗೇ ಸುಮ್ಮನೆ...... :-)

ಸುಂದರ ಕನಸನರಸಿ ಬಂದೆ
ಕನಸ ಬತ್ತಿಸಲಾರದೆ ನಿಂದೆ
ನಿನ್ನ ಕಣ್ಗಳ ಕನಸು ಸೆಳೆಯಿತೋ
ನಿನ್ನ ಮನವೋ ಇಲ್ಲ ಮೌನವೋ
ಮನವೀಗ ಕಾಮನಬಿಲ್ಲಲ್ಲೇ ಮಿಂದು
ಕಣ್ಗಳ ಕನಸನರಿಯಲು ಇಂದು, 
ನಿನ್ನೆದುರು ನಿನ್ನ ಕಣ್ಗಳ ಕಾಂತಿಯ ಸೆರೆ ನಾನು, 
ಪ್ರಿಯವಾಗಿದೆ ಬಂಧಿಯಾಗಿ
ಜೀವಾವಧಿ ವಿಧಿಸುವೆಯಾ??  :-)

ದಿವ್ಯ ಆಂಜನಪ್ಪ :-)
27/09/2013

2 comments:

  1. ಸಂಪೂರ್ಣ ಶರಣಾಗತಿ ಮೂಲಕ ಜೀವಾವದಿ ತಂತ್ರ.

    ReplyDelete
    Replies
    1. ಹಾಗೇ ಸುಮ್ಮನೆ...... ಸರ್ :-)

      Delete