Sunday 15 September 2013

ಹಿಂದೊಮ್ಮೆ ನಾನೂ ಎಂಜಿನಿಯರ್ ಆಗಬೇಕು ಅಂತ ಆಸೆಪಟ್ಟಿದ್ದೆ. ಅದರಲ್ಲೂ ಕಂಪೂಟರ್ ಎಂಜಿನಿಯರ್. ಕನಸ್ಸಲೆಲ್ಲಾ ಕಂಪೂಟರ್ಗಳೇ, ಸೀಟು ಕೂಡ ಸಿಕ್ಕುತ್ತು ಆದರೆ ಏನೇನೋ ಕಾರಣಗಳು ನನ್ನನ್ನು ಎಂಜಿನಿಯರಿಂಗ್ ಸೇರಲು ಬಿಡಲಿಲ್ಲ. ಅಪ್ಪನ ಮಾತಿನಂತೆ ಟಿ.ಸಿ.ಹೆಚ್ ಕಡೆ ಮುಖ ಮಾಡಿದೆ. ಆಗ ಇಷ್ಟ ಇರಲಿಲ್ಲ ಬಿಡಿ, ಮನಸ್ಸೆಲ್ಲಾ ಎಂಜಿನಿಯರಿಂಗ್ದೇ ಕನಸು. ಹೀಗಿದ್ದಾಗ ಮನೆ ಪಕ್ಕನೇ ಇರೋ ಡಯಟ್ ನಲ್ಲಿ ಟಿ.ಸಿ.ಹೆಚ್ ಸೀಟು ಸಿಕ್ಕಾಗ ಹೊಗಲ್ಲ ಅಂತ ಹೇಳೋಕು ಆಗಲಿಲ್ಲ. ಬೈಕೊಂಡು ಅತ್ಕೊಂಡು ಹೊಗಿದ್ದೆ ಆಗ.... 
ಮಾತ್ಮಾತಿಗೆ ಅಪ್ಪನ ಹತ್ತಿರ ನಾನೇನಾದ್ರು "ನನ್ನ ಎಂಜಿನಿಯರಿಂಗ್ ಗೆ ಸೇರಿಸ್ಲಿಲ್ಲ ನೀನಣ್ಣ" ಅಂತ ಬೇಜಾರ್ ಮಾಡಿಕೊಂಡ್ರೆ, ಅಪ್ಪ ಅಂತಾರೆ "ಆಗ ನಾನ್ ಸೇರಿಸಿದಿದ್ರೆ ಈಗ ನೀನ್ ಕವಿ ಆಗ್ತಿದ್ದಾ ??"  
ನಾನ್ ಕವಿನೋ ಕಪಿನೋ ಅಪ್ಪನ್ ಖುಷಿ ನೋಡಿ ನಂಗೂ ಖುಷಿಯಾಗುತ್ತೆ ನಕ್ಕುಬಿಡ್ತೀನಿ. ಆದ್ರೂ ನಾನ್ ಆಸೆಪಟ್ಟಿದ್ದ ಕೋರ್ಸ್ ನಾನು ಓದಲಾಗಲಿಲ್ಲ ಅನ್ನೋದು ಆಗಾಗ ಕಾಡುತ್ತೆ. 
ಕಂಪೂಟರ್ ಹುಚ್ಚೇ ಹೆಚ್ಚಿತ್ತು ಆಗ. ಕಂಪೂಟರ್ ಸೈನ್ಸ್ ತಗೊಂಡು ಎಂಜಿನಿಯರ್ ಆಗದಿದ್ರೂ ಹೋಗ್ಲಿ ಕಂಪೂಟರ್ ಆದ್ರೂ ನನ್ ಹತ್ರ ಇರ್ಲಿ ಅಂತ ಲಾಪ್ ಟಾಪ್ ತಗೊಂಡು ಈಗ ಶಾಲೆ ಬಿಟ್ರೆ ಇದರೋಳಗೇ ಮುಳಿಗೇಳ್ತಾ ಇದ್ದೀನಿ 

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ನವರ 153 ನೇ ಜಯಂತಿಯ ಶುಭಾಶಯಗಳು


15/09/2013

No comments:

Post a Comment