ಸಂತಸ ಬಯಸುವ ಮುನ್ನ ಸಂತಸ ಕೊಟ್ಟು ನೋಡಲಿ ಅದಿನ್ನೂ ಅದ್ಭುತ ಸಂತಸ ಕಂಡುಕೊಂಡರೆ ತುಸು ಹಾಸ್ಯ!
ದಿವ್ಯ ಆಂಜನಪ್ಪ 30/09/2013
ಸೊಗಸುಗಾರನ ಸೊಂಪಾದ ಕನಸಿನೆದೆಯಲಿ ಹಾಯಾಗಿ ಮಲಗಿಹ ಪ್ರೇಮಪಕ್ಷೀ ಹಾಡಿದೆ ಅದ ನಾ ಕೇಳಿದೆ; ರಾಗವು ಮಾತ್ರ ಅದೇ 'ಮೌನ' 30/09/2013
ಮುಂಜಾನೆ ಸಂಜೆ ರಾತ್ರಿ ಇವಿಷ್ಟೇ ಪುನರಾವರ್ತನೆ ಮತ್ತೇನಿಲ್ಲ ಹೊಸತು ಇನ್ನೇಕೆ ಭೀತಿ ಕಾಳ ರಾತ್ರಿ ಕಪ್ಪು ಕಂಡು
30/09/2013
ಚಿಂತೆಗಳ ಸಂತೆಯಲಿ ಜೀವಿಸುವ ಜೀವ ನಿರ್ಜೀವ!!
30/09/2013
ಅರ್ಥವಾದದ್ದಕ್ಕಿಂತ ಅರ್ಥವಾಗದವಕ್ಕೇ ಮನವು ಹೆಚ್ಚು ವಾಲುವುದು 29/09
ವಿರಹ ಹಣೆ ಬರಹವಲ್ಲ ಹಣೆಯ ಮೇಲೆ ಅಂಗೈಯಿಟ್ಟು ತಲೆ ಕೆರೆದುಕೊಳ್ಳುವಾಗ ಹಾಳೆಯ ಮೇಲೆ ಮೂಡಿದ ಬರಹ ಅನುಭವವಿಲ್ಲದ ಅಭಿವ್ಯಕ್ತಿ 29/09/2013
ಮೂರು ದಿನದ ಪ್ರೀತಿಗೆ ಆಜನ್ಮ ವಿರಹ ಹೆಣ್ಣಿಗೆ 29/09/2013
Saturday, 28 September 2013
ಹೀಗೊಂದು ತುಂಟತನ.....
ಕನಸ ಕಟ್ಟಲು ಹೇಳಿಕೊಟ್ಟವ ಕನಸಿಗೇ ಸ್ಫೂರ್ತಿಯಾದ ಮತ್ತ್ಯಾರಿಗಾದರೂ ಹೇಳಿಕೊಟ್ಟಾನೆಂದು ಕಟ್ಟಿ ಹಾಕಿರುವೆ ಕನಸುಗಳಿಂದ
ದಿವ್ಯ ಆಂಜನಪ್ಪ 29/09/2013
ಬಂಡೆ ಕಲ್ಲೇ ಆದರೂ ಬಾರಿ ಬಾರಿ ಭಾರಿ ಏಟ ತಾಳದು ಕೊನೆಗೂ ಮುರಿಯದಿದ್ದರೆ ಕೊನೆಪಕ್ಷ ಕಲ್ಲು ಎನ್ನರು ಯಾರೂ!!! 29/09/2013
ನಕ್ಷತ್ರಗಳು ಏಕೆ ಅಸಂಖ್ಯಾತವಾಗಿದೆ? ನಿದಿರೆ ಬರದ ರಾತ್ರಿಗಳಲ್ಲಿ ನೆತ್ತಿ ಮೇಲಣ ಕಾಂತಿ ಎಣಿಸುತ ಸೋತ ಕಣ್ಗಳಿಗೆ ಸೋಲು ತಿಳಿಸುತ ಸೋತು ನಿದಿರೆಯ ಪಡೆಯುವ ಕಲೆ ವಿವರಿಸುತ ಬಾಳ ಹಾದಿಗೆ ಅಣಿಗೊಳಿಸಲು
28/09/2013
ಬಣ್ಣಗಳು ಏಳಂತೆ ಬಣ್ಣಗಳೆಲ್ಲವ ಹೀರಿದರೆ ಕಪ್ಪಂತೆ ಬಣ್ಣಗಳೆಲ್ಲವ ಪ್ರತಿಫಲಿಸಿದರೆ ಬಿಳಿಯಂತೆ ಹಾಗಾದರೆ ಕಪ್ಪು ಕಟ್ಟಿ ಬಣ್ಣವಲ್ಲ ಬಿಳಿಪು ಬಿಟ್ಟು ಬಣ್ಣವಲ್ಲ ಆದರೂ ಕಪ್ಪು ಬಿಳುಪು ಬಣ್ಣಗಳಲ್ಲಿ ಬಣ್ಣಗಳಂತೆ! 28/09/2013
ಕಣ್ಣ ಹನಿಯೊಂದು ಕೇಳಿತು ಕಣ್ಗಳನು; ನಾ ನಿನಗೆ ಭಾರವೇ? ಹೊರಗೆ ಕೆಡವಿದೆಯಲ್ಲ! ಮತ್ತಷ್ಟು ಕಣ್ಣೀರುಕ್ಕಲು ಕಣ್ಣು ತಬ್ಬಿಕೊಂಡಿತು ಕಂಬನಿಗಳನು ಹೊರಬಿಡದಂತೆ ಕಣ್ಮುಚ್ಚಿ
ದಿವ್ಯ ಆಂಜನಪ್ಪ 28/09/2013
ಈ ಸುಂದರ ಸಂಜೆ ಪ್ರೀತಿ ತುಂಬಲಿ ನಿಮ್ಮಯ ಮನಗಳಲಿ ಬೆಳದಿಂಗಳ ಧಾರೆ ಹರಿಯಲಿ ರಾತ್ರಿಯ ಕನಸುಗಳಲ್ಲಿ
ದಿವ್ಯ ಆಂಜನಪ್ಪ 28/09/2013
ಬಹು ದಿನಗಳಿಂದ ಬರೆದೆ ನಾ, ಅವನ ಪ್ರೇಮವ, ದೀರ್ಘ ಕಾವ್ಯವಾಗಿ ಬಳಸಿ ಒಂದೇ ಶಬ್ಧ "ಮೌನ"
28/09/2013
ನಲ್ಲನ ಪಿಸುಮಾತು ನಲ್ಲೆಯ ಹೃದಯ ಮಿಡಿತ ಅವರಿಬ್ಬರ ಹೊರತು ಸುತ್ತಲಿನ ಕಿವಿಗಳಿಗದು ನೀರವತೆಯಷ್ಟೇ! 28/09/2013
Friday, 27 September 2013
ಹಾಗೇ ಸುಮ್ಮನೆ...... :-) ಸುಂದರ ಕನಸನರಸಿ ಬಂದೆ ಕನಸ ಬತ್ತಿಸಲಾರದೆ ನಿಂದೆ ನಿನ್ನ ಕಣ್ಗಳ ಕನಸು ಸೆಳೆಯಿತೋ ನಿನ್ನ ಮನವೋ ಇಲ್ಲ ಮೌನವೋ ಮನವೀಗ ಕಾಮನಬಿಲ್ಲಲ್ಲೇ ಮಿಂದು ಕಣ್ಗಳ ಕನಸನರಿಯಲು ಇಂದು, ನಿನ್ನೆದುರು ನಿನ್ನ ಕಣ್ಗಳ ಕಾಂತಿಯ ಸೆರೆ ನಾನು, ಪ್ರಿಯವಾಗಿದೆ ಬಂಧಿಯಾಗಿ ಜೀವಾವಧಿ ವಿಧಿಸುವೆಯಾ?? :-) ದಿವ್ಯ ಆಂಜನಪ್ಪ :-) 27/09/2013
ನಿನಗಿಂತ ಹೆಚ್ಚು ಕಾಡಿದ್ದು ನಮ್ಮ ಸಂಭಾಷಣೆಗಳ ನೆನಪು ನವಿರು ಕಂಪನವಾಗಿ ದಿನಕ್ಕೊಂದು ಅರ್ಥವ ನೀಡಿ ನವೀನವಾಗಿ ಮಧುರವಾಗಿ 27/09/2013
ಬೇಡವೆಂದು ಬಿಟ್ಟರು ಕೈ ಹಿಡಿದೆಳೆದು ಬರೆಸಿಕೊಳ್ಳುವೆಯಲ್ಲೇ ನೀ ಪ್ರೀತಿ! 27/09/2013
Thursday, 26 September 2013
ಕಾಲ ಮುಂದೆ ನಡೆದುಬಿಡುವುದು, ಇಂದು ತೋರಿದ ಬಿಗುವು ಮುಂದೊಂದು ದಿನದ ಪಶ್ಚಾತ್ತಾಪ; ಇದು ಕಾರಣ, ಕ್ಷಮೆ ಕೋರಲು ವಂದನೆಗಳ ಅರ್ಪಿಸಲು ಮನವೆಂದಿಗೂ ಹಿಂದೆ ಬೀಳಬಾರದು; ಹಾಗೆಯೇ ಜೊತೆಯಾದ ಸಂಬಂಧಗಳು ಬಿಟ್ಟು ನಡೆದರೂ ಬಾಧಿಸಬಾರದು ಉಳಿಸಿಕೊಳ್ಳುವ ಪ್ರಯತ್ನ ಇನ್ನೂ ಬಾಕಿಯಿತ್ತೆಂದು
ದಿವ್ಯ ಆಂಜನಪ್ಪ
27/09/2013
ಒಂದೇ ಬಳ್ಳಿಯ ಹೂವುಗಳವು ಐದು ಸುಕೋಮಲ, ಮೃದು, ಸುಂದರ, ಆಕರ್ಷಕ, ನೈಜ ದೂರ ಸರಿದರೂ ಮನವು ಒಂದರೊಳಗೊಂದು ಮಿಳಿತ ಆಕಸ್ಮಿಕ ಹೊಡೆತಕ್ಕೇನಾದರೂ ಚೀರಿತೆಂದರೆ ಒಂದು ಹೂ ಉಳಿದ ಹೂವುಗಳಲ್ಲಿ ಮೂರು ಸ್ವಭಾವತಃ ಮರುಗಿದರೆ ನಾಲ್ಕನೇಯ ಹೂ ಹಾವಿಗೂ ಹೆಚ್ಚೇ ಹೆಡೆಯೆತ್ತುವುದು. ಸಮಯದಿ ಹೂವೂ ಸಹ ತನ್ನ ಕೋಮಲತೆಯ ತೊರೆವುದು ತನ್ನವರಿಗಾಗಿ
ದಿವ್ಯ ಆಂಜನಪ್ಪ 26/09/2013
ಬರಿದಾಗುವುದು ತುಂಬಿಕೊಳ್ಳಲು ಮತ್ತೊಮ್ಮೆ ಅವನ ಪ್ರೀತಿಯನ್ನು 26/09/2013
ಮುಸ್ಸಂಜೆ ಮಾತು........
ಹೊರಡುವ ಮುನ್ನ ನಾನಿದ್ದೆ ನಿನಗದು ಗೊತ್ತಿತ್ತು ಉರಿವ ರವಿ ಹೊರಳಿದನು ಭೂರಮೆ ಕೊರಗಿದಳು! 25/09/2013
Wednesday, 25 September 2013
ಹೆಣೆದ ಎಷ್ಟೋ ಭಾವಗಳು ಪೂರ್ಣವಾಗದೇ ಉಳಿದಿರಬಹುದು ಬರೆದ ಸಾಲುಗಳು ಕೂಡ; ಜೀವನವೂ ಹಾಗೆಯೇ ಎನಿಸುವ ಕ್ಷಣಗಳೆಷ್ಟೋ?! ಎಲ್ಲೋ ನೂಕುತ್ತ, ಮತ್ತೆಲ್ಲೋ ಕುಂಟುತ್ತ ಇನ್ನೆಲ್ಲೋ ವಾಲುತ್ತ ತರಗೆಲೆಯಾಗಿ ಹಾರಿ ಮಳೆಯಲಿ ತೊಯ್ದು, ರಪ್ಪನೆ ಬಂಡೆಗೆ ಬಡಿದು ಕೆಲಕಾಲ ಕಲ್ಲಿಗೆ ಕಲ್ಲಾಗಿ ನಿಂತು, ಬಿಸಿಲ ತಾಕುತ್ತಲೇ ತೇವವಾರಿ ಮತ್ತೆ ಗಾಳಿಗಾರುವ ನಿರಂತರ ಸಂಚಾರಿ ಒಮ್ಮೆ ದಿಕ್ಕಾಗಿ ಮತ್ತೊಮ್ಮೆ ದಿಕ್ಕೆಟ್ಟು....... 25/09/2013
ಗಿಡ ನೆಟ್ಟು ಬೆಳಸಿದರೂ ಅದರೋಳು ಹೂಗಳ ಅರಳಿಸಲಾರೆ ಎನುವ ಸ್ನೇಹಿತನ ಅಳಲಿಗೆ ನನ್ನ ಸಮಾಧಾನದುತ್ತರ ಮೊಗ್ಗುಗಳಿರಬಹುದು ಕಾದು ನೋಡುವ ಸಂಯಮವಿರಲಿ; ಅವನ ಕಾವ್ಯಾತ್ಮಕ ಸಾಲಿಗೆ ನಾ ಸೇರಿಸಿದ್ದು ಸಾಲನಷ್ಟೇ ಅಷ್ಟೇ ಸಾಕಾಗಿತ್ತೇನೋ ವಿಸ್ತರಿಸಲು ಅವನ ಕಲ್ಪನೆಗಳ ಸರಹದ್ದಿಗೆ ಗೆಳೆತನವಲ್ಲಿ ನಿಂತಿತ್ತು ಪ್ರಶ್ನಿಸುತ್ತ ಇದು ಸ್ನೇಹನಾ? ಪ್ರೀತಿನಾ?
ದಿವ್ಯ ಆಂಜನಪ್ಪ 18/09/2013
ಮನಸ್ಸು ಕಟ್ಟಿ ಹಾಕಿದೆ ನಿನ್ನ ಮನಸ ಮಾತ ಕೇಳೆಂದು ನಾ ಅರಿಯಬಲ್ಲೆ ನಿನ್ನ ತಪನ ಅದಕೆ ನಾ ಸುಳಿಯಲಾರೆ ನಿನ್ನನುಮತಿಯಿಲ್ಲದೆ ಹೊಸ ನೆರೆಯಲ್ಲಿ 18/09/2013
Tuesday, 17 September 2013
ನೀನು ಇಲ್ಲಿ ಇಲ್ಲದೇ ಇದ್ದಿದ್ದರೆ ನಾನೂ ಇಲ್ಲಿರುತ್ತಿರಲಿಲ್ಲ! ಅವರಿವರ ಮುಳ್ಳುಗಳ ಸೋಕಿಸಿಕೊಂಡು ನಡೆಯುತ್ತಿರಲಿಲ್ಲ! ನೀ ಬರುವ ಹಾದಿ ಕಾದು ಈ ನೆಲದೊಳು ನಿಲ್ಲುತ್ತಿರಲಿಲ್ಲ 17/09/2013