Thursday, 9 January 2014


ನೀ ನನ್ನ ಚಂದಿರನ ಸೋಲಿಸಿ
ಎನ್ನ ಮನಗೆದ್ದ ಮನಮೋಹನ
ಕಲ್ಪನೆಗಳ ಕಲ್ಪವೃಕ್ಷ!!! 



***


ಬದುಕೊಂದು ಭಾವಗೀತೆ
ಆಗುವ ಮುನ್ನ 
ಕೆಟ್ಟಿತ್ತೇಕೆ
ನಿನ್ನರ್ಥ?!


***


'ದಲಿತ'
ಎಂದೊಡನೆ,
ಮನದೊಳು ಪ್ರತಿಫಲಿತ
ಭಾವ;
ನೋವುಗಳೊಡನೆ ಕಲಿತು
ಬದುಕ ರಂಗದೊಳು
ಬಲಿತ!


09/01/2014

****************************


ಭಾವವಿಲ್ಲದ ಜೀವ
ಜೀವವಿಲ್ಲದ ಭಾವ
ಮುಖಾಮುಖಿಯಾದವೊಮ್ಮೆ,
ಮಾತಿಗೂ ಹೆಚ್ಚಿತ್ತು ಕುತೂಹಲ 
ಒಂದರ ಮೇಲೊಂದಕೆ,
ಕ್ಷಣ ಕಾಲ ಕಳೆದು
ಮುನ್ನೆಡೆದವು ಸುಮ್ಮನೆ
ಅರಸುತ ತಮ್ಮ ಅಭಾವವ! 



***


ಹೂವೊಂದು ಕೂಗಿರಲು ದುಂಬಿಯ 
ಕೇಳಿಯೂ ಕೇಳದ ಕ್ಷೀಣ ದನಿಯಲಿ,
ಝೇಂಕಾರದ ಗುಂಗೇ ಸುತ್ತ ಬೇಲಿಯೋ ಎಂಬಂತೆ;
ನಶೆ ಏರಿತೋ, ವಿಷಯ ಘಟಿಸಿತೋ
ಹೂದೋಟದಾಚೆಗೇ ಚಿಮ್ಮುವಂತೆ
ಭ್ರಮೆ ಹುಟ್ಟಿದೆ ಭ್ರಮರಂಗೆ!


***


ನಮ್ಮ ಮೌಢ್ಯತೆ ಅರಿವಾಗುವುದು
ಅದರಿಂದ ಹೊರಬಂದ ಮೇಲೆಯೇ
ಅಲ್ಲಿಯವರೆಗೂ ಅದು ಬುದ್ಧಿವಂತಿಕೆ
ಎನಿಸಿಕೊಂಡಿರುತ್ತದೆ


08/01/2014

No comments:

Post a Comment