Sunday, 12 January 2014


ಹೃದಯದೊಳು ಸದ್ದಿದ್ದರೂ
ಸುದ್ದಿಯಾಗದಿರಲೆಂದು,
ಹಾಕಿರುವೆ ಮೌನ ಮುದ್ರೆ ಭಾವಗಳಿಗೆ
ಬಡಬಡಿಸದಿರಲೆಂದು...


***


ಸೂರ್ಯನೊಳು ಹುಟ್ಟುವ 
ಸಾವಿರ ಕೋಟಿ ಕಿರಣಗಳಲಿ
ತನಗೂ ಪಾಲುಂಟೆಂದು 
ಬದುಕುವ ಎಲೆಮರೆ ಚಿಗುರೇ 
ಆತ್ಮವಿಶ್ವಾಸ!


12/01/2014

No comments:

Post a Comment