Wednesday, 1 January 2014


ತುಳಿತಕ್ಕೊಳಗಾದ ಮೇಲೂ
ಕೂಗಿಗೆ ದನಿ ಇಲ್ಲವಾದರೆ
ಪಟ್ಟ ನೋವಿಗೂ ಬೆಲೆಯಿಲ್ಲ!


***


ಎಷ್ಟು ಬಣ್ಣಗಳೆ
ನಿನ್ನೂಳು ನವಿಲೆ
ಯಾವ ಬಣ್ಣಕೆ
ನಿನ್ನ ಹೆಸರಿಡಲೇ?


***


ಕಹಿಯ ನೆನೆನೆನೆದು
ರಾತ್ರಿಯಿಡೀ ರುದ್ರವಾದ ಮನ,
'ಬದುಕಲಿ ಇನ್ನೂ ಏನೇನೋ ಇದೆ
ಖುಷೀ ನೀಡಲು; 
ಅದನ್ನೆಲ್ಲಾ ಮರೆತೇಬಿಟ್ಟೆನೆಲ್ಲಾ'
ಎಂದುಲಿದುದು,
ಮುಂಜಾವಿನ ಕೋಳಿ ಕೂಗಿನಲ್ಲಿ
ಬೆರಗು ಕಂಡಾಗಲೇ 

28/12/2013

No comments:

Post a Comment