Wednesday, 1 January 2014




ನೀ ನೆಡೆಯುವ ಹಾದಿಯೊಳು
ಸುಲಭದಿ ಸಿಕ್ಕ ಹೊವೆಂದು
ಹೊಸಕದಿರು ನಿರ್ದಯಿಯೇ
ಎಂದಾದರೊಮ್ಮೆ ನಿನ್ನ ಮನವೂ
ಆದೀತು ಮೃದು ಹೂವಿನಂತೆ!


***


ಕೊಲ್ಲಬಹುದಿತ್ತು ನಿನ್ನನು
ಇಲ್ಲವೇ ಕೊಂದುಕೊಳ್ಳಬಹುದಿತ್ತು ನನನ್ನು
ನಿನ್ನೀ ಮೋಸದ ಆಘಾತದೊಳು
ಕೊಂದೆನಷ್ಟೇ ಈ ಮನಸನು
ನಿನ್ನ ನಂಬಿ ಮೆಚ್ಚಿದ ತಪ್ಪಿಗೆ.


***


ಅವನು ಪ್ರೀತಿಸುತ್ತಾನಂತೆ
ಅವನ ಹಳೆಯ ಪ್ರೀತಿ ಮರುಳಲು
ನಿಜ ನಾನೊಬ್ಬ ಫ್ಲರ್ಟ ಅಷ್ಟೇ 
ಎಂದು ಕೈ ಚೆಲ್ಲುತ್ತಾನಂತೆ

ಪ್ರೀತಿಗೆ ಹಚ್ಚಿದ ಇಂತಹ ಬಣ್ಣಗಳಿಂದ
ಪ್ರೀತಿಯೊಂದಿಗೆ ಮನಸ್ಸೂ ಸಾಯ್ವುದು

ಮನ಼ಃಸಾಕ್ಷಿ ಸತ್ತವರು 
ಅವರಿವರ ಬದುಕ ಬಯಲಾಟವಾಗಿಸಿಹರು 
ಛೇ!


27/12/2013

***********************


ಸ್ವಾಭಿಮಾನಕ್ಕೂ ಮಿಗಿಲು ಏನಿದೆ?
ಪ್ರೀತಿಯೇ ಎದುರಾದರೂ!


26/12/2013

No comments:

Post a Comment