ಮತ್ತೆ ಹುಟ್ಟಬೇಕು ಎಂದೆನಿಸಿದಾಗಲೆಲ್ಲಾ
ಸಾಯುವುದು ಅನಿವಾರ್ಯ ಎನಗೆ,
ದಿನಬೆಳಗಾದರೆ ಕಣ್ಮುಂದೆ ನಡೆದಾಡುವ ಜೀವನ್ಮುಖಿ ಚಿಣ್ಣರು
ನಕ್ಕು ಮರೆಸುವರು, ಹುಟ್ಟು-ಸಾವುಗಳ ತುದಿವೆರಡು,
ಎನ್ನಂತರಂಗಕ್ಕೆ ನೇರ ಲಗ್ಗೆ ಇಡುವ,
ಮನದ ವಿಷಾದಗಳ ಕರಗಿಸುವ ಇವರ ರೀತಿಗೆ
ಎಲ್ಲಿ ಹೊರಟುಬಿಟ್ಟವೋ ಆ ಕೊರಗುಗಳು
DA
07/01/2014
No comments:
Post a Comment