Thursday, 9 January 2014

ಚಂದಿರ


ರಂಗಮಂದಿರದೊಳು ಚಂದಿರ ವಿರಾಜಿಸಿದ್ದಾನೆ

ಕನ್ನೆಯರ ಕೆನ್ನೆಯಿಂದಿಳಿದು
ಕಣ್ಮಣಿಗಳ ಕಣ್ತಪ್ಪಿಸಿ 
ಊರ ಹೊರಗೆಲ್ಲೋ ಮಂದಿರದೊಳು
ಕಣ್ಮುಚ್ಚಿ ಮೈಮರೆತ್ತಿದ್ದಾನೆ
ಕಳ್ಳ ಚಂದಿರನ ಹುಡುಕದಿರುವಳೇ ನಾನು
ಇಗೋ ನೋಡಿ ಹಿಡಿದು ತಂದೆ

ರಂಗಮಂದಿರದ ಗಾಳಿ ಸೋಕಿ
ಇವನದೂ ಒಂದು ನಿದ್ರಿಸುವ ಅಭಿನಯವಂತೆ
ನಾ ಹುಡುಕಿ ಬರಲೆಂದು,
ಅವನ ನಿರೀಕ್ಷೆಯೇ ಹಾದಿ ಎನಗೆಂದು ತಿಳಿದೂ
ಕಾಡುವನು ಕಣ್ಮರೆಯಾಗಿ 
ಸಿಕ್ಕಿ ಬಿದ್ದನೀಗ ನೋಡಿ
ರಂಗಮಂದಿರದೊಳು ಚಂದಿರ ವಿರಾಜಿಸಿದ್ದಾನೆ
ಕಾದು ನನಗಾಗಿ


ಚಿತ್ರ ಕೃಪೆ; ಅಂತರ್ಜಾಲ

09/01/2014

No comments:

Post a Comment