ದುಃಖವ ಮೀರಿ ಬದುಕಬಹುದು
ಆದರೆ ಮನಸ್ಸು ಮೀರಲ್ಲ
******
ಒಳಗಿನ ವೇದನೆಯಷ್ಟೇ
ದನಿಯಾಗುವುದು
ಒಳಗಿನ ಮಿಡಿತವಷ್ಟೇ
ಪ್ರೇಮವಾಗುವುದು
ಉಳಿದಂತ್ತೆಲ್ಲಾ
ಶಬ್ಧಗಳು,
ಬಣಗುಡುವ ಶಬ್ದಗಳು
******
ಮರೆವೆನೆಂದು ಹೊರಟ ಮೇಲೂ
ದಾರಿಯುದ್ದಕೂ ನೆನಪ ರಾಶಿ ಸುರಿವ ನೀನು
ಕಾಡಿ ಕೊಲ್ಲುವೆಯೇಕೆ?
ನನ್ನ ನೀರಸ ಬದುಕೂ
ನಿನಗೆ ಸಹ್ಯವಾಗದೇ ಗೆಳೆಯನೇ?!
31/12/2013
No comments:
Post a Comment