ನೀ ಬರುವೆಯೆಂದು ಹಿಡಿದಿದ್ದೆ ಪ್ರೀತಿ ಹೂವ
ಅಂದು ನಾನು,
ಕೈಯ್ಯಲೊಂದು,
ನೀ ಬಾರದೇ ಹೋದಾಗಲೂ ಪ್ರೀತಿ ಹೂವ ಹಿಡಿದಿದ್ದೆ,
ಒಂದೇ ಒಂದು,
ಈಗಲೂ ಹಿಡಿದಿರುವೆ ಪ್ರೀತಿ ಹೂಗಳು,
ನಿನಗಾಗೆಂದು,
ಕೈಯೊಳಗಿನ 'ಪ್ರೀತಿ ಹೂವೊಂದು ಮೂರಾಗಿದೆ!'
ಏನಿದರ ಮರ್ಮ ಗೆಳೆಯ?!
ಹೇಳು ಬಾ ಇಂದು,
ಹೂವೂ ಮರಿ ಹಾಕಿದೆ!!
ಏನು ಅಂದ ಸೇವಂತಿ ಚೆಂಡು!
ದಿವ್ಯ ಆಂಜನಪ್ಪ
03/01/2014
No comments:
Post a Comment