Saturday 14 November 2015

ಪದ್ಯ

ದೀಪ


ದೀಪವಿರಲಿ ಸಾವಿರಾರು
ಈ ಕಣ್ಣ ಕಾಂತಿಗೆ ಸಾಲು ಕನಸು
ಹರಿದಷ್ಟೂ ಮನದ ಹರವು
ನೆಟ್ಟಿ ನಿಲ್ಲಲಿ ದೀಪದ ಕಾವು

ಅದು ಬೆಳಕಿಗಾಗಿಯೇ ಹೊತ್ತಿ ಉರಿವ ಬೆಂಕಿ
ಉಳಿದಂತೆ ಭೂರಮೆಯೊಳು ತಣ್ಣಗೆ ಮಲಗಿದ ಒಡಲು
ಬೆಂಕಿಯು ಬೇಕು ಕತ್ತಲೆಗೆ 
ಸಣ್ಣಗೆ ಮಿಣುಕಾಡುವಂತೆ
ಕಿಚ್ಚು ಇರಲಿ ಇರದಂತೆಯೂ
ಹೆಚ್ಚಿ ಇರಲಿ
ಅದುಮಿಟ್ಟರೂ ಪುಟಿವಂತೆಯೂ 
ಬೆಳಕಾಗುವ ಬೆಂಕಿ ಕತ್ತಲೂ ಹೌದು
ಹಿಡಿದಂತೆ ಚುಕ್ಕಾಣಿ ರಥದ ಪಥವು..

ದೀಪವಿದು ಗುರುದೀಪ
ದಾರಿ ನೀಡಿ ಕನಿಕರಿಸೋ ಕಾಲವು
ಕೈಯೊಳು ಹಿಡಿದು ಸಾಗಬೇಕು ಹಾದಿ
ದೀಪವಿದ್ದಡೆಯೇ ಅಂತ್ಯವೆಂದೆಣಿಸದೆ
ಙ್ಞಾನದ ಹಸಿವಿಗೆ 
ಎದುರಾದ ಕನ್ನಡಿಗಳು ಸಾಲು ಸಾಲು 
....ದೀಪಗಳ ಸಾಲು

10/11/2015

1 comment:

  1. ಹಾಯ್ ದಿವ್ಯ ಹ್ಯಾಗಿದೀರಿ? ಮುಂಗಾರಿನ ಹನಿ ಸುತ್ತ ಹನೀತಾ ಇರೋ ಈ ಚುಮು ಚುಮು ಹನೀತಾ ಇರೋ ಈ ಶ್ರಾವಣದ ಮುಂಜಾವದಲ್ಲೀ ನಿಮ್ ಸ್ನೇಹ ದೊರೆಯಬಹುದೇನೋ ಅನ್ನೋ ನಿರೀಕ್ಷೆ ಹೊತ್ತಿದೀನಿ ಅದೇ ನಿರೀಕ್ಷೆಯಲ್ಲೇ ನಿಮ್ಮನ್ನ ಮಾತಾಡಿಸ್ತಿದೀನಿ, ಕೊಡ್ತೀರಾ ನಿಮ್ ಸ್ನೇಹಾನ ನನಗೆ ಉಡುಗೊರೆಯಾಗಿ ಕಡೇ ತನಕ ಅಮೂಲ್ಯವಾಗಿ ಜತನ ಮಾಡ್ಕೊಂಡು ಕಾಪಿಟ್ಕೊಳೋ ಆಸೇ

    ReplyDelete